..
kruti by ವೀರನಾರಾಯಣ Veeranarayana
ಸ್ಮರಿಸಿವುದು ರಘುನಂದನನ ಪ
ನಿರುತದಿ ಬೆಳಗಿನೊಳೆದ್ದು ಭಕುತಿಯಲಿ ಅ.ಪ.
ಜನಪತಿ ದಶರಥನುದರದಿ ಜನಿಸಿದವನಿತೆ ಅಹಲ್ಯೆಯ ತಾನುದ್ಧರಿಸಿದಘನ ಶಂಕರ ಧನುವ ಭಂಗಿಸಿದಜನಕ ಸುತೆಯ ವರಿಸಿದ ಶ್ರೀರಾಮನ 1
ತಾಯಿ ಕೈಕೇಯಿಯ ಮಾತು ನಡೆಸಿದನೋಯದೆ ವನವನು ಸತಿಸಹ ಸೇರಿದಮಾಯಾಮೃಗದಾಶೆಗೆ ಸತಿಯನಗಲಿದರಾಯ ಲಕ್ಷ್ಮಣನಣ್ಣ ಶ್ರೀರಾಮನ 2
ದಂಡಕದೊಳು ಸತಿಯನು ಶೋಧಿಸಿದಚಂಡ ಹನುಮಗೆ ತಾ ದೊರೆಯಾದಪುಂಡ ಜಲಧಿಯ ದಾಟಿಸಿದಹೆಂಡತಿ ಇರವನು ತಿಳಿದ ಶ್ರೀರಾಮನ 3
ಜಲಧಿಗೆ ಸೇತುವೆ ನಿಂತು ಬಿಗಿಸಿದಖಲ ರಾವಣನ ರಣದೊಳು ಕೆಡಹಿದಒಲಿದು ವಿಭೀಷಣನನು ತಾ ಪೊರೆದನೆಲದೊಳು ಸುಖ ಬೀರಿದ ಶ್ರೀರಾಮನ 4
ಧರುಮವ ನೆಲಸಲು ದುಷ್ಟರ ತರಿದಾ ಧರೆಯೊಳು ಶಿಷ್ಟರ ಪೊರೆಯಲು ಬಯಸಿದಸಿರಿಪತಿ ಗದುಗಿನ ವೀರನಾರಾಯಣನರನಾಗವತರಿಸಿದ ಶ್ರೀ ರಾಮ 5
***