Showing posts with label ವಿದ್ಯಾ ವಿನಾಯಕಾ ಸಲಹೋ venkatanatha. Show all posts
Showing posts with label ವಿದ್ಯಾ ವಿನಾಯಕಾ ಸಲಹೋ venkatanatha. Show all posts

Saturday, 1 May 2021

ವಿದ್ಯಾ ವಿನಾಯಕಾ ಸಲಹೋ ankita venkatanatha

" ಶ್ರೀ ಗಣೇಶ ಸ್ತುತಿ  "

ರಚನೆ : ಆಚಾರ್ಯ ನಾಗರಾಜು ಹಾವೇರಿ

ಮುದ್ರಿಕೆ : ವೆಂಕಟನಾಥ


ವಿದ್ಯಾ ವಿನಾಯಕಾ ಸಲಹೋ ।

ಬಾದರಾಯಣ ಕೃಪಾ ಪಾತ್ರ ಮೋದದಾಯಕ ।। ಪಲ್ಲವಿ ।।

ಅಕ್ಷ ಸುರಾಂತಕನಾವೇಶಯುತನೇ ।

ಅಕ್ಷಿತ್ರಯ ಸುತನೇ ಷಣ್ಮುಖಾಗ್ರಜನೇ ।। ಚರಣ ।।

ಮಹೋದರನೇ ಉಮಾನಂದನನೇ ।

ಮಹೋರಗಶಯನನ ಪಾದವ ತೋರಿಸಯ್ಯ ।। ಚರಣ ।।

ಲಂಬಕರ್ಣನೇ ಲಂಪಟ ಬಿಡಿಸಿ । ವಿ ।

ಶ್ವ೦ಭರ ನಾಮಕ ವೆಂಕಟನಾಥನ ದಾಸನೆನಿಸೋ

***