Showing posts with label ಸರ್ವದಾ ವಿಸ್ಮøತಿಯನೀಗಿಮಾಡಿ ವೈಷ್ಣವರು prasannavenkata. Show all posts
Showing posts with label ಸರ್ವದಾ ವಿಸ್ಮøತಿಯನೀಗಿಮಾಡಿ ವೈಷ್ಣವರು prasannavenkata. Show all posts

Monday, 18 November 2019

ಸರ್ವದಾ ವಿಸ್ಮøತಿಯನೀಗಿಮಾಡಿ ವೈಷ್ಣವರು ankita prasannavenkata

by ಪ್ರಸನ್ನವೆಂಕಟದಾಸರು
ಶ್ರೀ ವಿಷ್ಣುಮಹಿಮೆ ಸಂಕೀರ್ತನೆ 

ಸರ್ವದಾ ವಿಸ್ಮøತಿಯನೀಗಿಮಾಡಿ ವೈಷ್ಣವರು ಪ.

ಪುಣ್ಯಮಾರ್ಗವನರಿಯದ ಮೂಢರಿಗೆಉನ್ನತಕುಟಿಲಪಾಮರಮನುಜರಿಗೆಘನ್ನ ಸಾಧನವಿದೆ ಮತ್ತೊಂದು ಕಾಣೆಪುಣ್ಯಶ್ಲೋಕನ ವಾರ್ತೆ ಕೀರ್ತನೆಯ ಪಠನೆ 1

ಜನ್ಮ ಮರಣವಿಲ್ಲ ಅವ ಜೀವನ್ಮುಕ್ತಧನ್ಯ ವಿಶುದ್ಧಾತ್ಮ ನಿಜ ಹರಿಭಕ್ತಚಿನ್ಮಯಾಚ್ಯುತನ ಚಾರಿತ್ರ್ಯವಿಸ್ತರವವರ್ಣವರ್ಣಂಗಳಿಂದೆ ಪಾಡಿ ನಲಿಯುತ 2

ಧರ್ಮ ಸುಮಾರ್ಗವರ್ಜಿತ ಕಲಿಯುಗದಿನಿರ್ಮಲಮನ ಹೊಂದಲೀಸದ ಭವದಿಧರ್ಮಪ್ರಭು ಶ್ರೀ ಹರಿಗುಣಕೀರ್ತನೆಉಮ್ಮಯದಲಿ ಮಾಡುವುದು ಹರಿಪ್ರಾರ್ಥನೆ 

 ವಿಶುದ್ಧಾಂತರಾತ್ಮ ಶ್ರೀಹರಿಗೆಗುರುಸುಖತೀರ್ಥರ ತೀರ್ಥಜೀವರಿಗೆಹರಿಹರಿಹರಿಎಂದು ಕೂಗಿ ಬಾಳ್ವರಿಗೆ4

ಅಘೋರ ಯಮಮಾರ್ಗ ನರಕ ಶ್ರೀಮದ್ಗರುಡಧ್ವಜ ನಾರಾಯಣಾಪವರ್ಗರಾಮ ರಾಮ ರಾಮ ರಾಮ ರಾಮನೆಂಬನಾಮಪಾಠಕರಿಗೆ ಸ್ವಪ್ನದಿ ವಜ್ರ್ಯ 5

ಹೃದಯದಿ ಹರಿರೂಪ ಮುಖದಿ ಸದ್ಗಾನಉದರದಿ ನೈವೇದ್ಯ ಶಿರದಿ ನಿರ್ಮಾಲ್ಯಸುದರ್ಶನಶಂಖಾಂಕಿತ ಭುಜದವರಿಗೆಪದ್ಮನಾಭನ ನಾಮಕೀರ್ತನೆಕೈವಲ್ಯ6

ಶತಕೋಟಿ ರಾಮಾಯಣ ಕೀರ್ತನೆ ಹನುಮಂತಯತಿ ಶುಕಾಚಾರ್ಯ ಭಾಗವತಶಾಸ್ತ್ರಸತತ ನಾರದದೇವ ಮುನಿತತಿ ನೃಪರೆಲ್ಲರತಿಪತಿಪಿತನ ಪೊಗಳಿ ಮುಕ್ತಾಗಿಹರು 7

ಕಲಿಕಾಲದಲಿ ಕೇಶವಗೆ ಪ್ರಿಯ ಕೀರ್ತನೆಲಲಿತಸಾಧನವೆನಿಪುದೀ ಕೀರ್ತನೆಬಲುಶ್ರುತಿಮಥಿತಾರ್ಥಸಾರವೆ ಕೀರ್ತನೆಹುಲುಮಾನವರಿಗೆ ದೂರವು ಹರಿಕೀರ್ತನೆ 8

ಭವರೋಗಭೇಷಜಹರಿನಾಮಕೀರ್ತನೆಭವವಾರ್ಧಿಪೋತ ಭವಾಟವಾಗ್ನಿಭವವಿಧಿಕೀರ್ತಿತಪದ ಪ್ರಸನ್ವೆಂಕಟಭವನದಾಸರು ಸವಿದುಂಬಾಮೃತವು 9
*******