Showing posts with label ಹೊರಗ್ಹೋಗಿ ಆಡಬೇಡವೋ ಕಂದಾ ಮಹಾನಂದಾ indiresha. Show all posts
Showing posts with label ಹೊರಗ್ಹೋಗಿ ಆಡಬೇಡವೋ ಕಂದಾ ಮಹಾನಂದಾ indiresha. Show all posts

Monday, 2 August 2021

ಹೊರಗ್ಹೋಗಿ ಆಡಬೇಡವೋ ಕಂದಾ ಮಹಾನಂದಾ ankita indiresha

ಹೊರಗ್ಹೋಗಿ ಆಡಬೇಡವೋ ಕಂದಾ ಮಹಾನಂದಾ ಬಹುಸರಸಿಜಾಕ್ಷಿಯರು ದೂರುವರೋ ಗೋವಿಂದಾ ಬಾ ಮನೆಗೆ ಮುಕುಂದಾ ಪ


ಹೆಂಗಸ ಕೊಂದನೆಂಬುವರು ಮನೆ ಅಂಗಳದೊಳಗೆ ಬಚ್ಚಿಟ್ಟು ಕೊಂಬುವರೋಶೃಂಗಾರದಲಿ ಮೋಹಿಸುವರೋ ತಮ್ಮ ಕಂಗಳಿಂದಲಿನೋಡಿ ದೃಷ್ಟಿ ಬಿಡುವರೋ1

ಕಳ್ಳತನವ ಕಲಿಸುವರೋ ಏನ ಬಲ್ಲೆ ಕಂದಮ್ಮ ನೀ ಸುಳ್ಳಕಲಿಸುವರೋಒಳ್ಳೆಯವರಲ್ಲ ಗೋಪಿಯರು ಗ್ರಾಮದಲೆ ನಿಲ್ಲಲು ಕೆಟ್ಟ ಸೊಲ್ಲನಾಡುವರೋ2

ಸುಂದರ ಸೌಭಾಗ್ಯನಿಧಿಯೇ ನಿನ್ನಒಂದು ಕ್ಷಣವು ಬಿಟ್ಟು ಇರಲಾರೆ ಹರಿಯೇ ಇಂದಿರೇಶನಸುರ ದೊರೆಯೇ 3

****