..
vageesha teertharu sode mutt year 1518
kruti by ವಿಶ್ವೇಂದ್ರತೀರ್ಥರು vishwendra teertharu sode mutt
ಭಳಿರೆ ವಾಗೀಶ ತೀರ್ಥಾಖ್ಯ ಮುನಿವರ್ಯ
ಇಳೆಯೊಳು ನಿನಗೆಣೆÂ ಕಾಣೆ ನಾ ಯತಿವರ್ಯ ಪ
ಜಗದೊಳು ದುರ್ವಾದಿ ಮತವ ಖಂಡಿಸಿದ
ಜಗದೀಶ ಹರಿಯೆ ಸರ್ವೋತ್ತಮನೆಂದು
ನಿಗಮಾರ್ಥವನು ಜಗದಿ ಸಾರಿದಾ ಕುಜನೇಭ
ಮೃಗರಾಜ ವಾದಿರಾಜರಿಗೆ ಗುರುವೆನಿಸಿದೆ 1
ಭಾವೀ ಸಮೀರ ಶ್ರೀವಾದಿರಾಜರ ಜನ್ಮೋ-
ತ್ಸವ ಕಾಲವರಿತಾಗ ಸುಮಪುರಕೆ ನೀನು
ತವಕದಿಂದಲಿ ಪೋಗಿ ಬಾಲಕನ ರಕ್ಷಿಸಿ
ಅವನನೆ ಯತಿರಾಜ ಪಟ್ಟದೊಳಿರಿಸಿದಿರಿ 2
ಗುರು ಮಧ್ವರಂತೆ ನೀ ಸರ್ವಶಾಸ್ತ್ರವ ಮಾಡಿ
ಧರಣಿಯೊಳು ರಾಜೇಶ ಹಯಮುಖನ ಚರಣ
ಸ್ಮರಿಸಿ ನೂರಿಪ್ಪತ್ತು ವತ್ಸರದ ಕಾಲದಲಿ
ಇರುವಿರೆನುತಲಿ ಅವರ ಹರಸಿದಿರಿ ದೊರೆಯೆ 3
***