Showing posts with label ಏಳು ಏಳು ಏಳು ಲೋಕದ ಒಡಿಯನೆ vijaya vittala. Show all posts
Showing posts with label ಏಳು ಏಳು ಏಳು ಲೋಕದ ಒಡಿಯನೆ vijaya vittala. Show all posts

Wednesday, 16 October 2019

ಏಳು ಏಳು ಏಳು ಲೋಕದ ಒಡಿಯನೆ ankita vijaya vittala

ಏಳು ಏಳು ಏಳು ಲೋಕದ ಒಡಿಯನೆ |
ಏಳು ಗೋವಳರಾಯ ಗೋಪೇರಿಗತಿ ಪ್ರಿಯಾ |
ಅಪ್ರಾಕೃತ ಕಾಯಾ ಸುರಮುನಿ ಗೇಯಾ |
ಏಳು ಗೋಪಾಲಕೃಷ್ಣ ಪ

ಪುರಂದರನ ದಿಶೆಯಲ್ಲಿ ಗರುಡಾಗ್ರಜನು ಬರಲು |
ಶರಧಿ ತೆರೆ ತಗ್ಗಿದವು
ಉರಗ ಪೆಡೆ ಪಸರಿಸಿದಾ | ಹರಿದು ಪೋಯಿತು | ಕಾಳ |
ಸುರ ವೈರಿಗಳು ಅಡಗಲು | ಅರಳಿದವು ಅರವಿಂದ |
ಝಂಕರಿಸಿ ಶುಕಪಿಕ ಮೃಗಾದಿ ಯೆ-|
ಕರುಣಾಳುಗಳ ದೇವನೆ 1

ಮೇರೆ ತಪ್ಪಿ ಬಂದಾ ರಥಸಹಿತ ಭಾಸ್ಕರನು ದಿಶದಿಶೆಗೆ ಕಿರಣಗಳ |
ಹರಹಿಕೊಳುತಾ | ಹರಿ ಗುರುವೆ ಪೇಳಲಳವೆ |
ಕಲಿಸಿ ಮಂದಿರದೊಳಗೆ ಎಳೆಬಾಳೆ |
ಶೃಂಗರಿಸಿದರು ಅರವಿಂದನಾಭ ಚೆಲುವ 2

ಪರಮ ಮಂಗಳವಾದ ದ್ವಾರ ದ್ವಾರಗಳಿಗೆ |
ವಿರಚಿಸಿತು ಕಳಿತೆ ತೋರಣ ಕನ್ನಡಿ ಮಲಕು |
ಭರದಿಂದಲಿ ಬಿಗಿದು ಮೇಲ್ಕಟ್ಟು ಚಿತ್ತರದ ಗೊಂಬೆ |
ಪರಿಚಾರವು ವಪ್ಪಲು | ಹಿರಿದು ಹೂವಿನ ಮಾಲೆ ಕಟ್ಟಿದವು |
ಮಕರವು ತುರ ತೊ
ಗರು ಪೊಗಳು ಕಾದೋದಕವು ತಂದಿರೆ | ಅರಸಾದ ಆದಿದೈವ3

ಪರಮ ಭಾಗವತರು ಬತ್ತೀಸರಾಗದಲಿ |
ಸ್ವರಮಂಡಲಾ ತಾಳ ತಂಬೂರಿ ಕಿನ್ನುರಿಗ ಸರವೇಣಿ ನಾನಾ ಗೀತ |
ಪರಿ ಪರಿ ಕೊಂಡಾಡುತಿರಲು |
ಕುಣಿಯುತಿದೆ ಸುರನಿಕರ ಪರಿಪಾಲಿಕ 4

ಸುರ ನರೋರಗ ಯಕ್ಷಗರುಡ ಸಿದ್ಧ ವಿದ್ಯಾ |
ಕಿನ್ನರ ಸಾಮ |
ಪರಮೇಷ್ಟಿ ವಾಲಗಕೆ ಬಂದು ಎ-
ದುರು ನಿಂದು ತುತಿಪನಾಹಕೊ ಭರಿತಾಭರಣವಿಟ್ಟು |
ಸರಸ್ವತಿ ಭಾರತಿ ಗಿರಿಜೆ ಸುರನಾರಿಯರು ತಮ್ಮ |
ಹರಿವಾಣ |
ದಾರುತಿಯ ಪಿಡಿದು ನಿಂದೈಧಾರೆ ಶರಣಾಗತ ವತ್ಸಲಾ 5

ಕರಿ ತುರಗ ರಥಪಾಯದಳವು ದಟ್ಟಡಿಯಾಗಿ |
ನೆರದಿದೆ ಸಭೆಯಲಿ ಸಪ್ತಾಂಗದವರುಂಟು |
ಅರಿ ಶಂಖಗದಾ ಪದುಮಖೇಟ ನಂದನ ಮುಸಲಾ |
ಪರಶು ನೇಗಲ ಸುಶಕ್ತಿ ಪರಿಪರಿಯ ದಿವ್ಯಾಯುಧವ ತಮತಮಗೆ |
ಧರಿಸಿ ಸಂತೋಷದಲಿ ದಾತಾರ ನಿನ್ನಯ ಬರುವ ಹಾರೈಸಿ |
ವೈರಿಗಳು ನೋಡುತಲಿ ಹಾರೆ ಕುರುವಂಶ ವಿನಾಶಕಾ 6

ಸುರಿಗೆ ಪಾರಿಜಾತದ ಮಲ್ಲಿಗೆ |
ಸುರವನ್ನೆ ಬಕುಳ ಪಾರಿ ಭದ್ರ ಸಂಪಿಗೆ |
ಮರುಗ ಮಲ್ಲಿ ಜಾಜಿ ಕಾಂಜಿ ಶಾವಂತಿಗೆ ಕರವೀರ ನಂದಾವರ್ತ |
ಅರಗುಂದ ಕುಂತಾತಸಿದವನ ಮುಡಿವಾಳ |
ಈರವಂತಿಕೆ ಕೇತಿಕಾ ಸರ್ವ ಕುಸುಮಗಳಿಗೆ |
ಶಿರೋರತನವಾದ ಎಳದುಳಸಿ ಹಾರಗಳಿಗೆ |
ಅರಿಗಳ ಮಸ್ತಕಾಂಕುಶಾ7

ಚರಣದಂದಿಗೆ ಪೆಂಡೆ ಪೊಂಗೆಜ್ಜಿ ಮಣಿಮಯದ |
ಸರಪಳಿಯು ತೊಡೆದು ಬಿರುದಾವಳಿಗಳು ಪೀತಾಂ |
ಕಾಂಚಿ ದಾಮಾ |
ಸರಿಗೆ ನ್ಯಾವಳಹಾರ ತುಳಸಿ ಕೌಸ್ತಭ ಪದÀಕ |
ಸಿರಿವತ್ಸ ಕನಕಕುಂಡಲ ನೊಸಲ ಮೃಗನಾಭಿ |
ಕರದಾಭೂಷ ಫಣಿಮಕುಟ ಧರಿಪಾ ದೇವಿ ನಿನ್ನ |
ದರುಶನ ಭಕ್ತರಿಗೆ ಲಾಭಾ 8

ಸಿರಿ ಏಳಲೀಸಳೊ ಹತ್ತವತಾರವನು ಧರಿಸಿದ ದಣವಿಕಿಯ |
ಕರಿ ಕಾಯಲಿ ಬಂದ ಭರದ ಉನ್ನತವು |
ರಣದೊಳಗೆ ಪಾರ್ಥನ್ನ ರಥದ ತುರುಗವ ನಡಿಸಿದ ಲಜ್ಜೆಯ |
ಸುರತ ಕ್ರೀಡೆಯಲಿ ಸ್ತ್ರೀಯರೋಳಾದಂಜಿಕಿಯೊ |
ವರವ ಕೊಡು ಎಂದು ಬಂದು ಮಮ ಭಕ್ತರ ಭಯವೊ |
ಸಿರಿ ವಿಜಯವಿಠ್ಠಲ ಉಡುಪಿಯ ಕೃಷ್ಣ ನಿನಗೆ |
ದರಿಲ್ಲವೆಂಬೊ ಘನವೊ9
**********