Showing posts with label ಮಂಗಳತ್ರಿವೆಂಗಳಪ್ಪ ಮಂಗಳಾಂಗ prasannavenkata. Show all posts
Showing posts with label ಮಂಗಳತ್ರಿವೆಂಗಳಪ್ಪ ಮಂಗಳಾಂಗ prasannavenkata. Show all posts

Thursday, 14 November 2019

ಮಂಗಳತ್ರಿವೆಂಗಳಪ್ಪ ಮಂಗಳಾಂಗ ankita prasannavenkata

by ಪ್ರಸನ್ನವೆಂಕಟದಾಸರು
ಮಂಗಳ ತ್ರಿವೆಂಗಳಪ್ಪ ಮಂಗಳಾಂಗ ರಂಗಗೆ ಶ್ರೀಮಂಗಳೆಯ ಸಂಗಗೆ ಜಗಂಗಳಾಂತರಂಗಗೆ ಪ.

ಕಂಗಳಿಕ್ಕದಂಗೆ ನಿಖಿಳಾಂಗ ಕಪಟಂ ಕಮಠಂ? ಗೆ ಭೂವೆಂಗಳರಸಂಗೆ ನರಸಿಂಗದೇವನಿಗೆ 1

ತಿಂಗಳೊಲಿದ್ದಗೆ ಖಳರ ಜಂಗುಳಿ ನಾದ್ದಂಗೆ ಕಲ್ಲವೆಂಗಳ ಮಾಳ್ಪಂಗೆ ಚೆಲ್ವ ಪೊಂಗೊಳಲೂದುವಂಗೆ 2

ತುಂಗಮೋಹನಗೆ ಸತುರಂಗವಾಹನಂಗೆ ವಿಹಂಗಗೆ ಭುಜಂಗಶಯನ ಪ್ರಸನ್ನವೆಂಕಟಂಗೆ 3
*******