Showing posts with label ಆರುತಿ ಬೆಳಗೆ ವಾರಿಧಿ ಸುತಿಗೆ ಸಾರ ಸಂಗೀತದಿಂದ shyamasundara. Show all posts
Showing posts with label ಆರುತಿ ಬೆಳಗೆ ವಾರಿಧಿ ಸುತಿಗೆ ಸಾರ ಸಂಗೀತದಿಂದ shyamasundara. Show all posts

Wednesday, 1 September 2021

ಆರುತಿ ಬೆಳಗೆ ವಾರಿಧಿ ಸುತಿಗೆ ಸಾರ ಸಂಗೀತದಿಂದ ankita shyamasundara

 ..

ಆರುತಿ ಬೆಳಗೆ | ವಾರಿಧಿ ಸುತಿಗೆ

ಸಾರ ಸಂಗೀತದಿಂದಲಿ ಪ


ಸಕಲ ವಸ್ತುವೆನಿಸಿ ಮುಕುತಿದಾಯಕ ಹರಿಗೆ

ಭಕುತಿಯಿಂದಲಿ ಬಿಡದೆ | ಸದಾಪೂಜಿಪ ಸಿರಿಗೆ

ವಿಖನ ಸಾದ್ಯಮರ ಗಣಕೆ | ಸುಖ ಕೊಡುವಳಿಗೆ

ಮಕರಧ್ವಜನ ಮಾಲೆಯಾದ ರುಕುಮನನುಜಗೆ 1


ಚಾರುಶ್ರಾವಣ ಭಾರ್ಗವ ಶುಭವಾರದ ದಿನದಿ

ಭೂರಿ ಭಕ್ತಿ ಭರಿತಳಾಗಿ ನಮಿಸುತ ಮನದಿ ನೀ

ಆರಾಧಿಸೆ ಘೋಡಶ ಉಪಚಾರದಿ ಮುದದಿ

ಕೋರಿಕೆಯನು ಗರೆಯುವ ವರಲಕ್ಷ್ಮಿಗೆ ಜಯದಿ2


ತಾಮರಸ ಸುಧಾಮಳಾದ ಸೋಮವದನಿಗೆ

ಗೋಮಿನಿ ಸೌದಾಮಿನಿ ಸಮ ಕೋಮಲಾಂಗಿಗೆ

ಶಾಮಸುಂದರ ಸ್ವಾಮಿಯ ಸುಪ್ರೇಮದ ಸತಿಗೆ

ಕಾಮಿತ ಫಲದಾಯಿನಿ ಶ್ರೀ ಭೂಮಿಜೆ ರಮಗೆ3

***