Showing posts with label ಭೃಂಗಕುಂತಳೆ ಶ್ರೀರಂಗನಸತಿ govinda. Show all posts
Showing posts with label ಭೃಂಗಕುಂತಳೆ ಶ್ರೀರಂಗನಸತಿ govinda. Show all posts

Thursday, 14 November 2019

ಭೃಂಗಕುಂತಳೆ ಶ್ರೀರಂಗನಸತಿ ankita govinda

by ಗೋವಿಂದದಾಸ
ಭೃಂಗಕುಂತಳೆ ಶ್ರೀರಂಗನಸತಿಸ-ರ್ವಾಂಗದಿ ಶೃಂಗಾರೆತುಂಗವಿಕ್ರಮೆತುರಂಗಗಮನೆಭವಭೃಂಗವು ನಿವಾರೆ ಪ

ಚರಣದಂದುಗೆ ನಡುಪಟ್ಟಿಯಉಡಿಗೆಜ್ಜೆಕರದಲಿ ಕಂಕಣ ಕಡಗ ಬಳೆಕೊರಳೊಳು ಮುತ್ತು ರತ್ನದಿ ಶೋಭಿಪತರತರ ಪದಕದ ಸರಮಾಲೆ1

ಬಾಲಚಂದ್ರನವೋಲು ದೇವಿ ಕ-ಪೋಲವು ಪೊಳೆಯುವುದುಲೋಲಾಡುವ ಗಿಳಿವಾಲೆಯು ಕರ್ಣಕೆ ವಿ-ಶಾಲದಿ ಶೋಭಿಪುದು2

ಪಟ್ಟೆ ಪೀತಾಂಬರ ಉಟ್ಟು ದೇವಿನೆರಿ ಚೆಲ್ಲುತ ನಡೆತಂದೂಸೃಷ್ಟಿಯೊಳ್ ಸುಜನರ ಪಾಲಿಸಿ ಲಕ್ಷುಮೀಕ್ಷುಲ್ಲರ ಮುರಿದಂದುಅರಿಸಿನ ಕುಂಕುಮ ಚಂದ್ರ ಕಸ್ತೂರಿಯುನಯನದಿ ಕಾಡಿಗೆಯುಶಿರದಿ ಮುಂದಲೆ ಬೊಟ್ಟು ಜಡೆಗೊಂಡೆ ಪುಷ್ಪವುಚರಣದಿ ಮಿಂಚಿಕೆಯೂ3

ಹಸ್ತದಿ ಪದ್ಮಾವು ಬೆರಳೊಳು ಉಂಗುರತಿತ್ತಿಗೆ ಮೂಗುತಿ ಮುಖರಗಳೂನಿತ್ಯವು ಸ್ಮರಿಸೆ ಗೋವಿಂದನ ದಾಸನಅರ್ಥಿಯೊಳ್ ದೇವಿಯ ಪೊರೆಯುವಳು4
*******