Showing posts with label ವಸ್ತು ಕಂಡೆನು ಒಂದು ಕರ್ತೃ ಸದ್ಗುರುವಿನ ಕೃಪೆಯಿಂದ mahipati. Show all posts
Showing posts with label ವಸ್ತು ಕಂಡೆನು ಒಂದು ಕರ್ತೃ ಸದ್ಗುರುವಿನ ಕೃಪೆಯಿಂದ mahipati. Show all posts

Wednesday, 1 September 2021

ವಸ್ತು ಕಂಡೆನು ಒಂದು ಕರ್ತೃ ಸದ್ಗುರುವಿನ ಕೃಪೆಯಿಂದ ankita mahipati

ವಸ್ತು ಕಂಡೆನು ಒಂದು ಕರ್ತೃ ಸದ್ಗುರುವಿನ ಕೃಪೆಯಿಂದ ಪ  


ತೇಜ:ಪುಂಜದ ರೂಪ ಮೂಜಗದೊಳಗಿದು ಅಪರೂಪ ನಿಜ ನಿರ್ವಿಕಲ್ಪ ಸುಜನರ ಹೃದಯಕ ಸದ್ಛನದೀಪ 1 

ರೂಪಕ ನೆಲೆಇಲ್ಲ ವ್ಯಾಪಕವಿದು ಜಗದೊಳಗೆಲ್ಲ ಗುಪಿತಜ್ಞಾನಿಯು ಬಲ್ಲ ಜಪತಪಕಿದು ಸಿಲ್ಕುವದಲ್ಲ 2 

ಙÁ್ಞನಕ ಸಾಹೀತ ಮುನಿಜನ ಹೃದಯದಿ ಸದೋದಿತ ಧ್ಯಾನಕೆ ಆಯಿತು ಮನಕಾಮನವಿದು ಪೂರಿತ 3 

ಮೂರಕೆ ವಿರಹಿತ ಮೂರುಲೋಕವು ವಂದಿತ ಪರಮ ಸಾಯೋಜ್ಯತ ತಾರಕವಸ್ತು ಸಾಕ್ಷಾತ 4 

ಬೈಲಿಗೆ ನಿರ್ಬೈಲ ಭಾವಿಕ ಬಲ್ಲನು ಇದರ್ಹೊಯಿಲ ಮಹಿಪತಿಗನುಕೂಲ ಜೀವನ್ಮುಕ್ತಿಗೆ ಇದು ಮೂಲ 5

****