RSS song .
ಹನಿಯು ವಾಹಿನಿಯಾಯ್ತು ವಾಹಿನಿಯು ಜಲಧಿ
ಕೇಶವನ ಛಲದಾರಿ ಯುವಜನರ ಬಲದಿ
ಸತತ ಸಾಧನೆಗೈದ ಭಾರತದ ಜಲದಿ ||ಪ||
ವಿಘ್ನಕೋಟೆಯ ಗೆದ್ದು ದಾಟಿಹುದು ಸಂಘ
ಅಗ್ನಿಯೊಳು ಮಿಂದು ಮೇಲೆತ್ತಿಹುದು ಶೃಂಗ
ಗೈದಿಹುದು ವೈರಿಗಳ ಬಹುವ್ಯೂಹ ಭಂಗ
ಪಸರಿಸಿದೆ ಸಾಹಸದ ಸಾಸಿರ ತರಂಗ ||೧||
ರೂಢಿಯೊಳಗೂಡಿರುವ ಮೌಢ್ಯವನು ತೊರೆದು
ಕಾಡಿರುವ ಕೇಡುಗಳ ಬೆನ್ನೆಲುಬು ಮುರಿದು
ಮೂಡಿಹನು ನೋಡಲ್ಲಿ ಜಾಗೃತಿಯ ಸೂರ್ಯ
ನೀಡಿಹನು ನಾಡಿದಕೆ ಕುಂದದಿಹ ಧೈರ್ಯ ||೨||
ಆಂತರಿಕ ಭೇದಗಳ ಅಂತರವನಳಿಸಿ
ಅಂತರಂಗದಿ ಐಕ್ಯ ಭಾವನೆಯ ನಿಲಿಸಿ
ಹಿಂದುಶಕ್ತಿಯು ಜಗದಿ ಬೆಳೆದು ಬಲವಾಯ್ತು
ವಿವಿಧ ವಾದ ವಿವಾದ ನೆಲೆಕಳೆದು ಹೋಯ್ತು ||೩||
***
haniyu vAhiniyAytu vAhiniyu jaladhi
kESavana CaladAri yuvajanara baladi
satata sAdhanegaida BAratada jaladi ||pa||
viGnakOTeya geddu dATihudu saMGa
agniyoLu miMdu mElettihudu SRuMga
gaidihudu vairigaLa bahuvyUha BaMga
pasariside sAhasada sAsira taraMga ||1||
rUDhiyoLagUDiruva mouDhyavanu toredu
kADiruva kEDugaLa bennelubu muridu
mUDihanu nODalli jAgRutiya sUrya
nIDihanu nADidake kuMdadiha dhairya ||2||
AMtarika BEdagaLa aMtaravanaLisi
aMtaraMgadi aikya BAvaneya nilisi
hiMduSaktiyu jagadi beLedu balavAytu
vividha vAda vivAda nelekaLedu hOytu ||3||
***