ಕಾಖಂಡಕಿ ಶ್ರೀ ಕೃಷ್ಣದಾಸರು
ಸಲಹು ಸಲಹು ಸಲಿಲಜನಯನಾ|ಎನ್ನಾ| ಇಳೆಯೊಳು ಮೊರೆಯ ಹೊಕ್ಕಿಹೆ ನಿನ್ನಾ ಪ
ಕರುಣ ನೋಟಗಳಿಂದಲಿ ನೋಡಿ|ಸರ್ವ| ಭಾರ ಒಪ್ಪಿಸಿಕೊಂಡು ನಿಜ ನೀಡಿ| ದಾರಿದೋರುವ ಸುಮತಿಯ ನಿಲಿಸಿ|ಅತಿ| ತರಳನೆನುತ ಭಯವನೆ ಹರಿಸಿ 1
ಹರಿದುರಿತದ ಬಂಧನ ಬಲಿಯಾ|ತವ| ಚರಣದ ಭಕುತಿ ಕೊಡಲಿ ದೊರಿಯಾ| ಹರಿಗುಡದರಸನ ದಶಮುಖದಾ ಸಂಗ| ಲಿರಿಸು ದಾಸರ ಸಗಟವನೊದೆದಾ2
ತ್ರಿಪುಟಿಯ ಸಂಗ ಬಿಡಿಸು ಮನದಿ|ಎನ್ನ| ವಿಪುಳ ವಾಜಿಯೊಳಿರಿಸು ಧೃಡದಿ ಕೃಪೆಯಲಿ ಮಹಿಪತಿ ಸುತ ಪ್ರಾಣಾ|ಎನ್ನ| ಅಪರಾಧ ಕ್ಷಮಿಸಿ ಹೊರಿಯೊ ಪೂರ್ಣಾ3
***