..
ಖೋಡಿಗುಣ ಜಗದಲ್ಲಿ ಹೂಡಿ ನೀ ನಲಿವಾಗ
ನಾಡೆದ್ದು ಕುಣಿಯುವದೊ ನಾಸ್ತಿಕಾದಲ್ಲಿ ಪ
ಮಾಡಿ ದುಪ್ಕ್ರಿಯ ಜಾಲ ಮತಿಭ್ರಷ್ಟತನದಲ್ಲಿ
ನೋಡರೂ ಸನ್ಮಾರ್ಗ ಗಾಡಿಕಾರನೆ ಹರಿಯೆ ಅ.ಪ
ಗತಿಸಿದಾ ತನುಗಳಲಿ ರತಿವಿಷಯಗಳ ಮಾಡಿ
ಮತಿ ಮನಸು ದುರ್ಭಾವಗಳಲಿ ನೆಯದು
ವೃತಿವದನ ಮನೆಮಾಡಿ ಮೈಮರೆದು ಬಾಳುವ
ಮತ್ರ್ಯರನು ನೋಡಲತಿ ಭೀತಿ ಆಹುದೊ ಮನಕೆ 1
ನಾನಾಭಾವವ ಪೊಂದಿ ಹಾನಿವಶರಾಗಿಹರು
e್ಞÁನನಿಧಿ ತವಕರುಣಕೆರವಾಗಿ ನಡೆದು
ನಾನಾ ದುಃಖದಿ ನರಳಿ ನರಕ ಯಾತನೆಗೊಂಬ
e್ಞÁನಹೀನರ ನೋಡಿ ನಡುಗುವೆನೊ ಹರಿಕಾಯೊ 2
ಕ್ವಚಿತು ಸಜ್ಜನ ತಾವು ಶುಚಿ ಮನದಿ ನಿನ್ನಲ್ಲಿ
ರುಚಿಗೊಳಲು ಎತ್ತೆನಿಸೆ ಎದೆ ಬಿಚ್ಚುವಂತೆ
ಹೆಚ್ಚಿ ಆದಿವ್ಯಾಧಿ ನುಚ್ಚು ಮಾಳ್ಪದೊ ಮನಸು
ಸಚ್ಚಿದಾನಂದ ಹರಿ ಸಜ್ಜನಾಧಾರಿ ಧೊರಿ3
ಇಂದುಶೇಖರ ವಿಧಿ ಲಕ್ಷ್ಮಿ ಸನ್ನತ ಮಹಿಮ
ಬಂದ ಭಯಗಳು ನಿನ್ನ ಇಚ್ಛೆಯಿಂದ
ಬಂದದಲ್ಲದೆ ಬೇರೆ ಒಂದು ಕಾರಣ ಕಾಣೆ
ಕುಂದಳಿದು ನಿತ್ಯಸುಖ ಸಿಂಧು ಕೊಡುವವ ನೀನೆ4
ತಾಮಸರ ವಿಕಾರ ದುಃಖರಸÀ ಸೃಜಿಸುವುದು
ಸೌಮ್ಯ ಜನ ಸದ್ಭಾವ ಸುಖಸಾರ ಸೃಷ್ಟಿ
ಕಾಮಧೇನು ಜಯೇಶವಿಠಲಯ್ಯ ನಿನ್ನ ಮಹ
ನೇಮ ಇಂಥಾದ್ದೆ ಪತಿತ ಪಾವನ ಪಾಹಿ 5
****