Showing posts with label ಕಷ್ಟಪಟ್ಟರು ಇಲ್ಲ ಕಳವಳಿಸಿದರಿಲ್ಲ neleyadikeshava. Show all posts
Showing posts with label ಕಷ್ಟಪಟ್ಟರು ಇಲ್ಲ ಕಳವಳಿಸಿದರಿಲ್ಲ neleyadikeshava. Show all posts

Wednesday, 16 October 2019

ಕಷ್ಟಪಟ್ಟರು ಇಲ್ಲ ಕಳವಳಿಸಿದರಿಲ್ಲ ankita neleyadikeshava

ಕಷ್ಟಪಟ್ಟರು ಇಲ್ಲ ಕಳವಳಿಸಿದರಿಲ್ಲ 
ಭೃಷ್ಟಮಾನವ ನಿನ್ನ ಹಣೆಯ ಬರಹವಲ್ಲದೆ ಇಲ್ಲ || 

ಸಿರಿವಂತರ ಸ್ನೇಹಮಾಡಿ ನಡೆದರಿಲ್ಲ 
ಪರಿಪರಿಯಲ್ಲಿ ವಿದ್ಯೆ ಕಲಿತರಿಲ್ಲ 
ನರಿಯ ಬುದ್ಧಿಯಲ್ಲಿ ನಡೆದುಕೊಂಡರು ಇಲ್ಲ 
ಅರಿಯದೆ ಹಲವ ಹಂಬಲಿಸಿದರಿಲ್ಲ || 

ಕೊಂಡಾಡಿ ಕಾಡಿ ನೀ ಬೇಡಿಕೊಂಡರು ಇಲ್ಲ 
ಕಂಡಕಂಡವರಿಗೆ ಕೈಮುಗಿದರಿಲ್ಲ 
ಗಂಡುಗತ್ತರಿಯನ್ನು ಕೊರಳಿಗಿಟ್ಟರು ಇಲ್ಲ ಪ್ರ-
ಚಂಡನಾದರೂ ಇಲ್ಲ ಪರಿಹಾಸವೆಲ್ಲ || 

ಕಟ್ಟಾಳು ಕಡುಜಾಣನಾಗಿ ಪುಟ್ಟಿದರಿಲ್ಲ 
ಬೆಟ್ಟಗಳನು ಕಿತ್ತಿಟ್ಟರಿಲ್ಲ 
ಸೃಷ್ಟಿಯೊಳು ಕಾಗಿನೆಲೆಯಾದಿಕೇಶವರಾಯ 
ಕೊಟ್ಟವರಿಗೆ ಉಂಟು ಕೊಡದವರಿಗೆ ಇಲ್ಲ ||
*********