ಧ್ರುವತಾಳ
ಬಂದ ಮನ್ಮಾನಸಕೆ ಶ್ರೀ ಹರಿ ll ಪ ll
ಇಂದಿರೆರಮಣ ಮುಕುಂದ ಆನಂದದಿ ll ಅ ಪ ll
ಥಳಥಳಿಸುವ ನವರತ್ನ ಕಿರೀಟವು
ಹೊಳೆವ ಮಕರ ಕುಂಡಲ ಧ್ವಜವು
ತುಳಸಿಮಾಲೆ ವನಮಾಲೆಯಿಂದೊಪ್ಪುತ
ಬಲು ತೇಜಸ್ವಿಗೆ ತೇಜೋಮಯನಾದ ಹರಿ ll 1 ll
ಲಲನೆ ರುಕ್ಮಿಣಿ ಸತ್ಯಭಾಮೆಯರಿಂದೊಡಗೂಡಿ
ನಲಿದಾಡುತ ಎನ್ನ ಹೃದಯದಲಿ
ಬಲು ಬಲುವಿಗಢ ಅಜ್ಞಾನಾಂಧಕಾರದ
ಕುಲವನೋಡಿಸಿ ಮತ್ಕುಲದೈವಮೂರುತಿ ll 2 ll
ಎಷ್ಟು ಜನುಮದ ಪುಣ್ಯ ಬಂದೊದಗಿತೊ
ಎಷ್ಟು ಧನ್ಯರೊ ನಮ್ಮ ಹಿರಿಯರು
ಎಷ್ಟು ದೇವತೆಗಳು ನಮಗೆ ಹರಸಿದರೊ
ದೃಷ್ಟಿಗೋಚರ ನಮ್ಮ ವ್ಯಾಸವಿಟ್ಠಲ ll 3 ll
***