Showing posts with label ಅಗಣಿತಾಗಣಿತ ಮಹಿಮ ಜಗದೊಳು others. Show all posts
Showing posts with label ಅಗಣಿತಾಗಣಿತ ಮಹಿಮ ಜಗದೊಳು others. Show all posts

Friday, 27 December 2019

ಅಗಣಿತಾಗಣಿತ ಮಹಿಮ ಜಗದೊಳು others

by ಬಡೇಸಾಹೇಬರು
ಅಗಣಿತಾಗಣಿತ ಮಹಿಮ ಜಗದೊಳು ನಿಮ್ಮ
ಬಗೆ ತಿಳಿಯುವರಾರಮಮ ||ಪ||

ಮಗನ ಮಗನಿಗೆ ಒಲಿದು ಮಗಳ ಧಾರೆಯನೆರೆದಿ
ಮಗಳ ಮಗನ್ವೈರಿಯ ನಿಗಯಿಟ್ಟು ಸಲಹಿದಿ ||ಅ||

ಓಂಕಾರದಾಚೆಗಿರ್ದ ಅಮಲರೂಪ
ಓಂಕಾರದೊಳು ನೆಲೆಸಿದಿ
ಅಂಕುರಿಸಕ್ಷರತ್ರಯಲಂಕಾರದಿಂ ಸೃಷ್ಟಿ-
ಸಂಕಲ್ಪಗೈದು ನಿಷ್ಕಲಂಕನೆಂದೆನಿಸಿದಿ     ||೧||

ಸೃಷ್ಟಿ ಉತ್ಪತ್ತಿಗೈದಿ ಉದರದಿ
ಇಟ್ಟು ರಕ್ಷಕನೆಂದೆನಿಸಿದಿ
ಶಿಕ್ಷಕೆನಿಸಿ ಸರ್ವಸಾಕ್ಷಿ ನೀನೆಯಾಗಿ
ಮೋಕ್ಷ ನೀಡುವ ಮದಧ್ಯಕ್ಷನೆಂದೆನಿಸಿದಿ ||೨||

ಮೇದಿನಿಗೆ ಪತಿಯೆಂದೆನಿಸಿ ದಾಸರ ಪ್ರಿಯ
ಮೇದಿನಿಸುತೆ ಮದುವ್ಯಾದಿ
ವೇದಸಮ್ಮತಗೈದಿ ಸಾಧುಜನಕಹುದಾದಿ
ಅದಿ ಶ್ರೀರಾಮ ಮಮ ಬೌದ್ಧದೇವನಾದಿ ||೩||
*******