Showing posts with label ಆರುತಿ ಎತ್ತಿರೆ ವೈಯ್ಯಾರಿಯರರಸಗೆ kamalanabha vittala. Show all posts
Showing posts with label ಆರುತಿ ಎತ್ತಿರೆ ವೈಯ್ಯಾರಿಯರರಸಗೆ kamalanabha vittala. Show all posts

Thursday, 5 August 2021

ಆರುತಿ ಎತ್ತಿರೆ ವೈಯ್ಯಾರಿಯರರಸಗೆ ankita kamalanabha vittala

 ..

kruti by Nidaguruki Jeevubai

ಆರತಿ ಎತ್ತಿರೆ ವೈಯ್ಯಾರಿಯರರಸಗೆ
ಶ್ರೀ ರಮಾಕಾಂತ ಶ್ರೀ ಶ್ರೀನಿವಾಸನಿಗೆ ಪ

ಕೇಶವ ನಾರಾಯಣ ಮಾಧವನಿಗೆ
ಶ್ರೀಶ ಗೋವಿಂದ ವಿಷ್ಣು ಮಧುಸೂದನಗೆ
ಆಸೆಲಿ ತ್ರಿವಿಕ್ರಮ ವಾಮನ ಶ್ರೀಧರಗೆ
ಸÉೂೀಸಿಲಿ ಹೃಷಿಕೇಶ ಪದ್ಮನಾಭನಿಗೆ 1

ಧರಣಿಜಪತಿ ದಾಮೋದರ ಸಂಕರ್ಷಣನಿಗೆ
ಪರ ವಾಸುದೇವ ಪ್ರದ್ಯುಮ್ನ ಅನಿರುದ್ಧನಿಗೆ
ಪರುಷೋತ್ತಮ ಅಧೋಕ್ಷಜ ನಾರಸಿಂಹಗೆ
ಸರಸಿಜಾಕ್ಷ ಅಚ್ಚುತ ಜನಾರ್ದನಗೆ2

ಮಮತೇಲಿ ಸುಜನರ ಪೊರೆವ ಉಪೇಂದ್ರನಿಗೆ
ಶ್ರಮ ಪರಿಹರಿಸುವ ಹರಿ ಶ್ರೀ ಕೃಷ್ಣನಿಗೆ
ಕಮಲದಳಾಕ್ಷಗೆ ಕಮನೀಯ ರೂಪಗೆಕಮಲನಾಭವಿಠ್ಠಲಗೆ ತರುಣಿಯರು 3
***