Showing posts with label ಬಿನ್ನಹಕೆ ಬಾಯಿಲ್ಲ ಭೂತನಾಥ ನಿನ್ನ ಪದರಜ ಸ್ನಾನ jayesha vittala. Show all posts
Showing posts with label ಬಿನ್ನಹಕೆ ಬಾಯಿಲ್ಲ ಭೂತನಾಥ ನಿನ್ನ ಪದರಜ ಸ್ನಾನ jayesha vittala. Show all posts

Thursday, 5 August 2021

ಬಿನ್ನಹಕೆ ಬಾಯಿಲ್ಲ ಭೂತನಾಥ ನಿನ್ನ ಪದರಜ ಸ್ನಾನ ankita jayesha vittala

 ..

ಬಿನ್ನಹಕೆ ಬಾಯಿಲ್ಲ ಭೂತನಾಥ ಪ


ನಿನ್ನ ಪದರಜ ಸ್ನಾನ ನೀಡೆನ್ನ ಉದ್ಧರಿಸು ಅ.ಪ.


ಹೀನ ಯೋಗ್ಯತೆಗಿನ್ನು ಏನು ಮಾಡಲೊ ಸ್ವಾಮಿ

ಧೇನು ವತ್ಸನ ತೆರದಿ ಪಾಲಿಸೆನ್ನ

ವೇಣುಗೋಪಾಲನಾ ಧ್ಯಾನ ನಿಲ್ಲದು ಮನದಿ

ನಾನು ನನ್ನದು ಬಿಡದು ಎನಗಾವ ಗತಿಯಿನ್ನು 1

ನೀಲಕಂಠನೆ ನಿನ್ನ ನೀಳಪಾದದ ಧೂಳಿ

ಮೂರ್ಲೋಕದಘತೂಲಕಗ್ನಿ ಸತತ

ಫಾಲಾಕ್ಷ ಪತಿತ ಪರಿಪಾಲಕನು ನೀನೊಬ್ಬ

ಹಾಲಲ್ಲಿ ಅದ್ದೆನ್ನ ಹರಿಭಕ್ತರ ಬಂಧು 2


ಮನಕರಣ ತನು ವಿಷಯ ಘನಪಾಶದಲಿ ಸಿಕ್ಕಿ

ಉಣಿಸುವುವು ಮಹದುಃಖ ಎನ್ನ ಮೀರಿ

ಮನೋ ಹೃದಯದಲಿ ದೋಷ ತುಂಬಿ ತುಳುಕುವುದಯ್ಯ

ಎನಿತು ನಿನ್ನಲಿ ನಿಂದು ಪೊರೆಯೆಂದು ಮೊರೆ ಇಡಲಿ 3


ದುಷ್ಟವಾಸನೆ ಶಕ್ತಿ ಮೆಟ್ಟಿ ಆಳುವುದೆನ್ನ

ವೃಷ್ಟೀಶನಲಿ ಎನ್ನ ಪೋಗಬಿಡದೊ

ದುಷ್ಟನಕ್ರಗೆ ಸಿಕ್ಕ ಕರಿಯಂತೆ ಬಾಯ್ಬಿಡುವೆ

ಕಷ್ಟ ಪರಿಹರಿಸಯ್ಯ ಹರಿನಿಷ್ಠಧ್ಯಾನವನಿತ್ತು 4


ಶತಕೋಟಿ ಶ್ರುತಿಯಲಿ ಜಯೇಶವಿಠಲ

ನತಬಂಧು ಎಂತೆಂದು ಸಾರುತಿಹುದು

ಹಿತಭಕ್ತ ನೀ ಹರಿಗೆ ಹರಿಮೀರ ನಿನ್ನುಕ್ತಿ

ಪತಿತಪಾವನ ನನ್ನ ಹರಿಭಕ್ತನ ಮಾಡು5

***