Showing posts with label ಅಪರಾಧಿ ನಾನಲ್ಲ ಅಪರಾಧವೆನಗಿಲ್ಲ ಕಪಟ ನಾಟಕ purandara vittala APARADHI NANALLA APARADHA VENAGILLA KAPATA NATAKA. Show all posts
Showing posts with label ಅಪರಾಧಿ ನಾನಲ್ಲ ಅಪರಾಧವೆನಗಿಲ್ಲ ಕಪಟ ನಾಟಕ purandara vittala APARADHI NANALLA APARADHA VENAGILLA KAPATA NATAKA. Show all posts

Wednesday 1 December 2021

ಅಪರಾಧಿ ನಾನಲ್ಲ ಅಪರಾಧವೆನಗಿಲ್ಲ ಕಪಟ ನಾಟಕ purandara vittala APARADHI NANALLA APARADHA VENAGILLA KAPATA NATAKA

rendering by sri Tandava Murthy in Prosper, Texas July 1, 2022


ಶ್ರೀ ಪುರಂದರದಾಸರ ಕೃತಿ 

ರಾಗ ಪೀಲೂ ಅಟತಾಳ

ಅಪರಾಧಿ ನಾನಲ್ಲ ಅಪರಾಧವೆನಗಿಲ್ಲ
ಕಪಟ ನಾಟಕ ಸೂತ್ರಧಾರಿ ನೀನೇ ||ಪ||

ನೀನೇ ಆಡಿಸದಿರಲು ಜಡ ಒನಕೆಯ ಬೊಂಬೆ
ಏನು ಮಾಡಲು ಬಲ್ಲುದು ತಾನೆ ಬೇರೆ
ನೀನಿಟ್ಟ ಸೂತ್ರದಿಂ ಚಲಿಪವು ಕೈಕಾಲುಗಳು
ನೀನೇ ಮುಗ್ಗಿಸಲು ಮುಗ್ಗುವ ದೇಹದವನು ||

ಒಂದೆಂಟು ಬಾಗಿಲ ಪಟ್ಟಣಕ್ಕೆ ತನ್ನ-
ದೆಂದು ಇಪ್ಪತ್ತಾರು ಮನೆಯಾಳ್ಗಳ
ತಂದು ಕಾವಲ ನಿಲಿಸಿ ಎನ್ನ ನೀ ಒಳಗಿಟ್ಟ
ಮುಂದೆ ಭವದಲಿ ಭವಣಿಪುದನ್ಯಾಯ ||

ಯಂತ್ರ ವಾಹಕ ನೀನೇ ಒಳಗಿದ್ದು ಎನ್ನ ಸ್ವ-
ತಂತ್ರನೆಂದೆನಿಸಿ ಕೊಲಿಸುವರೆ ಹೇಳೊ
ಕಂತು ಪಿತ ಲಕ್ಷ್ಮೀಶ ಎಂತಾದಡಂತಹುದಾ-
ನಂತ ಮೂರುತಿ ನಮ್ಮ ಪುರಂದರ ವಿಠಲ||
*********

ರಾಗ ಕಲ್ಯಾಣಿ       ಖಂಡಛಾಪುತಾಳ (raga tala may differ in audio)

pallavi

aparAdhi nAnalla aparAdhavenagilla kapaTa nATaka sUtradhAri nInE

caraNam 1

nInE Adisadiralu jaDa onakeya bombe Enu mADalu balludu tAne bEre
nIniTTa sUtradim calipavu kaikAlugaLu nInE muggisalu mugguva dEhadavanu

caraNam 2

ondeNTu bAgila paTTaNakke tannadendu ippattAru maneyALgaLa
tandu kAvala nilisi enna nI oLagiTTu munde bhavadali bhavaNibudanyAya

caraNam 3

yantra vAhaka nInE oLagiddu enna svatantranendenisi kolisuvare hELO
kantu pita lakSmIsha entAdaDantahudAnanda mUruti namma purandara viTTala
***

Revati-KChapu-Santhanam
2 ratnaangi janya
Aa: S R1 M1 P N2 S
Av: S N2 P M1 R1 S

aparAdhi nAnalla aparAdhavenagilla kapaTa nATaka sUtradhAri nInE (aparAdhi)

nInE Adisadiralu jaDavunikeya bombe Enu mADalu balladu tAnebEra
NIniTTa sUtradi calipavu kaikAlugaLu nInE mukkisalu mukkuvadE had0avanu (aparAdhi)

ondeNDu bAgila paTTaNakkedannadendu ippattAru maneyALgaLa
tandu kAvala nilisi enna nI oLagiTTu munde bhavadali phavaNibudanyAya (aparAdhi)

yantra vAhaka nInE oLagiddu enna svatantranendenisi kolisuvare hELO
kantu pita lakSmIsha endAdaDandahudAnanda mUruti namma purandaraviThala (aparAdhi)
***
 

Meaning:
I am not a sinner. This so-called life is all a fake and it is of your making. What can a doll, shaped like a pounding sick, do for itself? Because of the Sutras you hold in your hand you are able to cause movements in the hands and legs. In this city-like body you have restrained me and having closed off all the nine exits that are guarded by twenty-six sentries and making me suffer through this miserable life, is indeed unfair. Are you not the operator of my internal engine? Under these conditions what kind of independence do I have? Purandaravithala! The father of Manmata and one manifesting himself in several forms, all that happens in this world is because of your will.
***


ಅಪರಾಧಿ  
ನಾನಲ್ಲ ಅಪರಾಧವೆನಗಿಲ್ಲ ॥ ಪ ॥
ಕಪಟನಾಟಕ ಸೂತ್ರಧಾರಿ ನೀನೇ ॥ ಅ ಪ ॥

ನೀನೆ ಆಡಿಸದಿರಲು ಜಡ ಒನಿಕೆಯ ಬೊಂಬೆ ।
ಏನು ಮಾಡಲು ಬಲ್ಲದು ತಾನೇ ಬೇರೆ ॥
ನೀನಿಟ್ಟ ಸೂತ್ರದಿಂ ಚಲಿಪವು ಕೈಕಾಲುಗಳು ।
ನೀನೇ ಮುಗ್ಗಿಸಲು ಮುಗ್ಗುವ ದೇಹದವನು ॥ 1 ॥

ಒಂದೆಂಟು ಬಾಗಿಲ ಪಟ್ಟಣಕ್ಕೆ ತನ್ನದೆಂದು ।
ಇಪ್ಪತ್ತಾರು ಮನೆಯಾಳ್ಗಳಾ , ತಂದು ॥
ಕಾವಲು ನಿಲಿಸಿ ಎನ್ನ ನೀ ಒಳಗಿಟ್ಟು ।
ಮುಂದೆ ಭವದಲಿ ಬವಣಿಪುದನ್ಯಾಯ ॥ 2 ॥

ಯಂತ್ರವಾಹಕ ನೀನೆ ಒಳಗಿದ್ದು ಎನ್ನ ಸ್ವ - ।
ತಂತ್ರನೆಂದೆನಿಸಿ ಕೊಲಿಸುವರೆ ಹೇಳೋ ॥
ಕಂತುಪಿತ ಲಕ್ಷ್ಮೀಶ ಎಂತಾದಡಂತಹುದ - ।
ನಂತ ಮೂರುತಿ ನಮ್ಮ ಪುರಂದರವಿಠಲ ॥ 3 ॥
***

ಅಪರಾಧಿ ನಾನಲ್ಲ ಅಪರಾಧವೆನಗಿಲ್ಲ |
ಕಪಟನಾಟಕ ಸೂತ್ರಧಾರಿ ನೀನೆ ಪ

ನೀನು ಆಡಿಸಲು ಜಡವೊನಕೆ ಅಭಿನಯಬೊಂಬೆಏನು ಬಲ್ಲದು ಬೇರೆ ಕೃತಿಯನೊಂದ ||ನೀನಿಟ್ಟ ಸೂತ್ರದಿಂದಲುಗೆ ಕೈಕಾಲುಗಳು |ನೀನೆ ಮಗ್ಗಿಸಲು ಮಗ್ಗುವ ದೇಹ ತಾನಾಗೆ 1

ಒಂದೆಂಟು ಬಾಗಿಲುಗಳುಳ್ಳ ಪಟ್ಟಣಕೆ ತನ-ಗೆಂದು ಇಪ್ಪತ್ತಾರು ಮನೆಯಾಳ್ಗಳ ||ತಂದು ಕಾವಲುನಿಲಿಸಿ ಎನ್ನ ನೀನೊಳಗಿಟ್ಟುಮುಂದೆ ಭವಭವದಿ ದಣಿಪುದು ನಿನ್ನದನ್ಯಾಯ 2

ಯಂತ್ರವಾಹಕನೀನೆ ಒಳಗೆ ಇದ್ದೂ ಎನ್ನ-ಸ್ವತಂತ್ರನೆಂದೆನಿಸಿ ಕೊಲಿಸುವರೆ ಹೇಳೊ ||ಕಂತುಪಿತ ಲಕ್ಷ್ಮೀಶ ಎಂತಾದಡಂತಹುದನಂತ ಮೂರುತಿ ನಮ್ಮಪುರಂದರವಿಠಲ3
****



ಅಪರಾಧಿ ನಾನಲ್ಲ ಅಪರಾಧವೆನಗಿಲ್ಲ

ಕಪಟ ನಾಟಕ ಸೂತ್ರಧಾರಿ ನೀನೇ || ಪ ||


ನೀನೇ ಆಡಿಸದಿರಲು ಜಡ ಒನಿಕೆಯ ಬೊಂಬೆ

ಏನು ಮಾಡಲು ಬಲ್ಲುದು ತಾನೆ ಬೇರೆ

ನೀನಿಟ್ಟ ಸೂತ್ರದಿಂ ಚಲಿಪವು ಕೈಕಾಲುಗಳು

ನೀನೇ ಮುಗ್ಗಿಸಲು ಮುಗ್ಗುವ ದೇಹದವನು || 1 ||

ಒಂದೆಂಟು ಬಾಗಿಲುಗಳುಳ್ಳ ಪುರಕೆ

ತನ್ನದೆಂದು ಇಪ್ಪತ್ತಾರು ಮನೆಯಾಳ್ಗಳ

ತಂದು ಕಾವಲ ನಿಲಿಸಿ ಎನ್ನ ನೀ ಒಳಗಿಟ್ಟ

ಮುಂದೆ ಭವದಲಿ ಭವಣಿಪುವದು ನಿನ್ನದನ್ಯಾಯ || ೨ ||


ಯಂತ್ರವಾಹನ ನೀನೇ ಒಳಗಿದ್ದು ಎನ್ನ ಸ್ವ-

ತಂತ್ರನೆಂದೆನಿಸಿ ಕೊಲಿಸುವರೆ ಹೇಳೊ

ಕಂತು ಪಿತ ಲಕ್ಷ್ಮೀಶ ಎಂತಾದಡಂತಹುದಾ-

ನಂತ ಮೂರುತಿ ನಮ್ಮ ಪುರಂದರ ವಿಠಲ || ೩ ||
***

Bhavartha by Dr.Vijayendra Desai


ಅಪರಾಧಿ ನಾನಲ್ಲ -

ಅಪರಾಧಿ ನಾನಲ್ಲ ಅಪರಾಧವೆನಗಿಲ್ಲ

ಕಪಟ ನಾಟಕ ಸೂತ್ರಧಾರಿ ನೀನೇ || ಪ ||


ಪುರಂದರದಾಸರು ಜ್ಞಾನಿವರೇಣ್ಯರು. ಸಂಸಾರಿಗಳ ಬವಣೆ ಕಂಡವರು. ಉಂಡವರು. 

ಏಕೀ ಬವಣೆ?

ವಿಚಾರಿಸಿ ನೋಡಲು ಸೋಜಿಗವಾಗಿದೆ.

ಹರಿಯಲ್ಲಿ ದೂರನ್ನು ಕೊಂಡೊಯ್ದರು.

ಸಂಸಾರಿ ಮಾತು -

ಈಶ, ದಾಸ ಸಂವಾದ -

'ಸ್ವಾಮಿ, ‌ ನನಗೇಕೆ ಈ ಸಂಸಾರ ಬವಣೆಯ ಶಿಕ್ಷೆ?'

'ಏನ ಅಪರಾಧ ನನ್ನದು? 

ಅಪರಾಧ ನಾ ಮಾಡಿಲ್ಲ. ಅಪರಾಧಿ ನಾನಲ್ಲ.

ನಾ ಬಯಸಿ ಬರಲಿಲ್ಲ  ಸಂಸಾರಕೆ.

ನೀ ತಂದೆ ನಾ ಬಂದೆ.'

ಜಗವೊಂದು ನಾಟಕ. ನಿನ್ನ ಕಪಟ ನಾಟಕ! ಜೀವರ ಕರೆತರುವೆ. ಸೂತ್ರ ಹಿಡಿವೆ. ಕುಣಿಸಿ ನೋಡಿ ನಗುವೆ. 

ಕಪಟನಾಟಕ ಸೂತ್ರಧಾರಿ ನೀನಲ್ಲವೇ!



ನೀನೇ ಆಡಿಸದಿರಲು ಜಡ ಒನಿಕೆಯ ಬೊಂಬೆ

ಏನು ಮಾಡಲು ಬಲ್ಲುದು ತಾನೆ ಬೇರೆ

ನೀನಿಟ್ಟ ಸೂತ್ರದಿಂ ಚಲಿಪವು ಕೈಕಾಲುಗಳು

ನೀನೇ ಮುಗ್ಗಿಸಲು ಮುಗ್ಗುವ ದೇಹದವನು || 1 ||

'ಯಥಾ ದಾರುಮಯೀಂ ಯೋಷಾಂ ನರಃ ಸ್ಥಿರಃ ಸಮಾಹಿತಃ' -

ಮಹಾಭಾರತದ ಮಾತು.

ಕಠಪುಥಲಿ‌ - ಕಟ್ಟಿಗೆ ಬೊಂಬೆಗಳು ನಾವು.

ಕಟ್ಟಿದ ಸೂತ್ರ ನಿನ್ನ ಕೈಯಲ್ಲಿ.

ನೀನು ಆಡಿಸಿದರೇ ಆಟ.  ಇಲ್ಲದಿರೆ ನಡೆಯದು ನಮ್ಮಾಟ. ಜಡ ಒನಿಕೆಯಂತೆ.

ಇಟ್ಟಲ್ಲಿ ಇರುವೆ.

ಜ್ಞಾನೇಂದ್ರಿಯ ಕರ್ಮೇಂದ್ರಿಯ ಎಲ್ಲ ನಿನ್ನ ಅಧೀನ.

ನಿನ್ನಿಚ್ಛೆಯಂದದಿ ಅವುಗಳ ಕ್ರಿಯೆ.

ಕೈಕಾಲು ಅಲ್ಲಾಡುವದು ನಿನ್ನಿಂದ.

'ತೇನವಿನಾ ತೃಣಮಪಿ ನ ಚಲತಿ'

ಹುಲ್ಲು ಅಲಗಾಡುವದು ನಿನ್ನಿಂದ. ಅಂದಮೇಲೆ ಕಾಲಿನಿಂದ ನಡೆಯುವದು

ಕೈಯಿಂದ ಕೆಲಸ ಮಾಡುವದು ನಿನ್ನ ಪ್ರೇರಣೆ ಎಂದು ಬೇರೆ ಹೇಳಬೇಕೆ?

ಪ್ರೇರ್ಯ ಪ್ರೇರಕ ನೀನು.



ಒಂದೆಂಟು ಬಾಗಿಲುಗಳುಳ್ಳ ಪುರಕೆ

ತನ್ನದೆಂದು ಇಪ್ಪತ್ತಾರು ಮನೆಯಾಳ್ಗಳ

ತಂದು ಕಾವಲ ನಿಲಿಸಿ ಎನ್ನ ನೀ ಒಳಗಿಟ್ಟ

ಮುಂದೆ ಭವದಲಿ ಭವಣಿಪುವದು ನಿನ್ನದನ್ಯಾಯ || ೨


ನನ್ನ ಕರ್ಮ ಎಂದೆ. ಅದರಿಂದ ಬಂಧಿಸಿದೆ. ಮಾಯೆಯ ಕವಚ. ಅಜ್ಞಾನದ ಆವರಕ. 

'ಎಲೆ ಜೀವ, ನಿನ್ನ ವಾಸಕೆ ಶ್ರೇಷ್ಠ ಪುರ'ವೆಂದೆ. 

ಈ ಕಾಯ ನೀ ಕೊಟ್ಟೆ.  ಅದಕುಂಟು ಪರಿಪರಿಯ ವೈಭವ.

ಎರಡು ಕಣ್ಣು ಕಿವಿ ಮೂಗು, ಬಾಯಿಗಳಾದಿ ನವದ್ವಾರಗಳು ನೀ ಕೊಟ್ಟ ಅರಮನೆಗೆ. ಜೀವನೇ ಅರಸ.   

ಕೈಗೊಂದು ಕಾಲಿಗೊಂದು ಆಳು.

ಪಂಚ ಕರ್ಮೇಂದ್ರಿಯ, ಪಂಚ ಜ್ಞಾನೇಂದ್ರಿಯ, ಪಂಚ ಭೂತಗಳು, ಪಂಚತನ್ಮಾತ್ರಾಗಳು,ಮನಸು, ಬುದ್ಧಿ, ಅಹಂಕಾರ, ಮತ್ತೆ ಸತ್ವ ರಜ ತಮ ಗುಣಗಳ ಪ್ರಕೃತಿ ಆದಿ ಇಪ್ಪತ್ತಾರು ಕಟ್ಟಾಳುಗಳ ಇಟ್ಟೆ.

ಇಂದ್ರಿಯಗಳಿಗಾಗಿ ವಿಷಯ ಸುಖಗಳ ಕೊಟ್ಟೆ.

ಜೀವ ವಾಲಿದತ್ತ ಎಳೆಯುವ ಆಳುಗಳಿವು.

ದೇಹವೇ ರಥ. ಜೀವ ರಥಿಕ. 

ಇಂದ್ರಿಯಗಳೇ ಕಟ್ಟಿದ ಕುದುರೆಗಳು. ಮನ,ಬುದ್ಧ್ಯಾದಿಗಳೇ ಲಗಾಮು.

ಆಳುಗಳ ಸದುಪಯೋಗ ಸಾಧನೆಗೆ ಹೆದ್ದಾರಿ. ದುರುಪಯೋಗ ಪತನಕ್ಕೆ ರಹದಾರಿ.

ಒಳಗೆ ಮಮಕಾರ ಅಹಂಕಾರ ತುಂಬಿದೆ.

ಮದ ಮೋಹ ಮತ್ಸರಾದಿ ಷಡ್ ವೈರಿಗಳಿಂದ ಅಲಂಕರಿಸಿದೆ. ಎತ್ತ ತಿರುಗಿದತ್ತ ಬಂಧನ. ತಪ್ಪಿಸಿಕೊಳ್ಳ ಬಾರದು ಅಂತು ಸೂತ್ರದಿ ಕಟ್ಟಿದೆ. ಸಂಸಾರ ಸಮುದ್ರಕೆ ಎಸೆದೆ.

ತಂದೇ, ನೀ ತಂದೆ ನಾ ಬಂದೆ.

ಅಪರಾಧಿ ನಾನಲ್ಲ.

ಜಗವೆಂದೆ. ಸಂಸಾರವೆಂದೆ. ಮುದ್ದು ಮಡದಿ ಮಕ್ಕಳು ಎಂದೆ. ಪ್ರಿಯ ಬಂಧು ಬಳಗವೆಂದೆ. ಅಬಿಮಾನ ಕೊಟ್ಟೆ. ಧನ ಕನಕ ಮನೆ ಮಠ ಸಿರಿ ಸಂಪದವೆಂದಿಟ್ಟೆ. ಬಿಟ್ಟಿರಲಾರದ ನಂಟು. ನಿನ್ನ ಗಂಟು. ಮುಳಗಿ ತೊಳಲಾಡುವ ಬರಿ ಬವಣೆ ನನ್ನದು ನೋಡುವೆ. ನಸು ನಗುವೆ. ಇದು ಯಾವ ನ್ಯಾಯ? 

ಅಪರಾಧಿ ನಾನಲ್ಲ ಅಪರಾಧ ನನಗಿಲ್ಲವಲ್ಲ!


ಯಂತ್ರವಾಹನ ನೀನೇ ಒಳಗಿದ್ದು ಎನ್ನ ಸ್ವ-

ತಂತ್ರನೆಂದೆನಿಸಿ ಕೊಲಿಸುವರೆ ಹೇಳೊ

ಕಂತು ಪಿತ ಲಕ್ಷ್ಮೀಶ ಎಂತಾದಡಂತಹುದಾ-

ನಂತ ಮೂರುತಿ ನಮ್ಮ ಪುರಂದರ ವಿಠಲ || ೩ ||


ತನುವಿದು ತಂತ್ರ. ನಡೆದಾಡುವ ಯಂತ್ರ.

ಯಂತ್ರ ನೀನೇ. ಯಂತ್ರದ ತಂತ್ರ ನೀನೆ.   ಯಂತ್ರದೊಳೂ ನೀನೆ.

ಮಾತನಾಡುವ ಮಂತ್ರ ನೀನೆ. ಮಾತಿನೊಳು ನೀನೇ.

ಒಳ ಹೊರಗೆ ನೀನಿದ್ದು -

ಮಾಡಿ ಮಾಡಿಸುವೆ.

ನಡೆದು ನಡೆಸುವೆ.

ನುಡಿದು ನುಡಿಸುವೆ.

ಪರಾಧೀನ ಕರ್ತತ್ವ ನನ್ನದು.

ನನ್ನ ಕರ್ತತ್ವ ನಿನ್ನ ಅಧೀನ.

ಮತ್ತೆ ನನಗೆ ನಾನೇ ಮಾಡಿದೆ ಎನಿಸುವೆ.

ಸ್ವಾತಂತ್ರ್ಯ ನನಗಿಲ್ಲ. ದತ್ತ ಸ್ವಾತಂತ್ರ್ಯ ನಿನ್ನದು.

ಎಲ್ಲ ನಂದೇ ಎಂದು ಭಾವಿಸುವೆ.

ನಿನ್ನ ಮರೆಸುವೆ. ಎನ್ನ ಮೆರೆಸುವೆ.

ನಾನು., ನನ್ನಂಥ ಅರಸು ಇನ್ನಿಲ್ಲ ಎನ್ನುವೆ.

ಎಂಥ ಪರಿ ಮರಳು ಮಾಡುವೆ ಮಾಧವ!.

ಗತಿ ತಪ್ಪಿ ತಿರುಗುವೆ. ಜನನ, ಮರಣ ಮರಳಿ ಮರಳಿ ಸಂಸಾರ ಚಕ್ರ! 

ಓ ಎನ್ನ ದೇವಾ, ಬ್ರಹ್ಮನ ಪಿತನೇ, ಲಕ್ಷ್ಮೀಯ ಪತಿಯೆ

'ಅಪರಾಧವೆಣಿಸದೇ ಸಂಸಾರ ಚಕ್ರದಿ ತಿರುಗಿಸುವದು ಯಾವ ನ್ಯಾಯ ಸ್ವಾಮಿ?'

ಈಶಗೆ ದಾಸರ ಪ್ರಶ್ನೆ.

ಮತ್ತೆ ಮನದಾಳದಲಿ ದೊರೆಗೆ ವಂದಿಸಿದರು ದಾಸರು. ಆಲೋಚಿಸಿದರು. 

ಯೋಚಿಸಿ ನೋಡಲು ಸರಿಯಾಗಿದೆ. ಸೋಜಿಗವಾಗಿದೆ ಅವನ ಲೆಕ್ಕ ಎಂದರು ದಾಸರು.

ಸ್ವರೂಪ ನನ್ನದು. ಯೋಗ್ಯತೆ ನನ್ನದು. ಅದರಂತೆ ಜ್ಞಾನ ಇಚ್ಛಾ ಪ್ರಯತ್ನ ನನ್ನದು.

ಇವುಗಳ  ಪ್ರೇರ್ಯ ಪ್ರೇರಕ ನೀನಲ್ಲವೇ. ನಿನ್ನದೇನು ತಪ್ಪು? 

ವೈಷಮ್ಯ ನೈರ್ಘಣ್ಯರಹಿತ ಸ್ವಾಮಿ ನೀನು.ತಾರಕ ನೀನು. ಗುಣಪೂರ್ಣ. ನಿರ್ದೋಷ ದೊರೆ ನೀನು.

ಮತ್ತೆ ಈ ಸಂಸಾರ ಶಿಕ್ಷೆ ನನಗೆ ನೀ ಕೊಟ್ಟಿದ್ದು ಯಾಕೆ? ನನ್ನ ಉದ್ಧಾರಕ್ಕಾಗಿ ಅಲ್ಲವೇ? ಸ್ವಪ್ರಯೋಜನ ರಹಿತ ನೀನು. ಆದರೂ

ಅವರವರ ಗತಿ ಅವರಿಗೆ ಕಾಣಿಸಿ ಕೊಡುವೆ. ಸ್ವರೂಪಾನಂದ ಅನುಭವಿಸಲು ಕೊಡುವೆ. 

ಇಂತು ಉಪಕರಿಸುವ ಕರುಣಾಸಾಗರ ನೀನು.

ಸ್ವಾಮಿ ಅಪರಾಧಿ ನಾನು. ಕರ್ಮಗಳ ಗಂಟು ನನ್ನ ಅಪರಾಧ. ಅದಕೆ ಉಂಟು ಈ ಮುಗಿಯದ ಸಂಸಾರದ ಆಟ.

ಹಾಗಾದರೆ ಗಂಟು ಬಿಚ್ಚುವ ಬಗೆ ಎಂತು? 

ಹರಿಭಜನೆ ಮಾಡೋ ನಿರಂತರ.

ಬೆಳೆಸುವದು ನಿನ್ನಲ್ಲಿ ಜ್ಞಾನ ಭಕ್ತಿಯ ನಂಟು ಇದು ತಾರಕ.

ಅನಂತರೂಪದ ಪುರಂದರ ವಿಠ್ಠಲ ದೊರೆಯೇ ನನ್ನನ್ನು ಉದ್ಧರಿಸುವದು ನಿನಗೆ ಕೂಡಿದ್ದು ಎನ್ನುತ್ತಾರೆ. ಭಕ್ತಿಯ ಪರಾಕಾಷ್ಠೆಯಿಂದ ನಮಿಸುತ್ತಾರೆ.

ಡಾ ವಿಜಯೇಂದ್ರ ದೇಸಾಯಿ.
*****