Showing posts with label ನಡೆರಂಗ ನಡೆ ಕೃಷ್ಣ ನಡೆ ಮನೆಗೆಧೃಡ ramesha. Show all posts
Showing posts with label ನಡೆರಂಗ ನಡೆ ಕೃಷ್ಣ ನಡೆ ಮನೆಗೆಧೃಡ ramesha. Show all posts

Tuesday, 12 November 2019

ನಡೆರಂಗ ನಡೆ ಕೃಷ್ಣ ನಡೆ ಮನೆಗೆಧೃಡ ankita ramesha

by ಗಲಗಲಿಅವ್ವನವರು
ನಡೆರಂಗ ನಡೆ ಕೃಷ್ಣ ನಡೆ ಮನೆಗೆಧೃಡ ಭಕ್ತರ ಕೂಡಿ ದ್ವಾರಕೆಗೆ ಪ.

ಬಂದ ಜನರಿಗೆಲ್ಲ ಗಂಧ ಕುಂಕುಮವನಿಟ್ಟುತಂದು ತಾಂಬೂಲ ಕೊಡುತಲೆತಾಂಬೂಲ ಕೊಡುತಲೆ ರುಕ್ಮಿಣಿಕುಂದವ ಮಾಡಿ ಬಗೆಯದೆ 1

ಮಿತ್ರೆ ದ್ರೌಪತಿದೇವಿ ಮತ್ತೆ ಪಾದಕ್ಕೆರಗಿಅತ್ಯಂತ ನಾವು ನುಡಿದೆವಅತ್ಯಂತ ನಾವು ನುಡಿದ ಅಪರಾಧವಚಿತ್ತದೊಳಿಡದೆ ಕರುಣಿಸು 2

ಅರಗಿಳಿ ಮಾತಿನಹರದಿಸುಭದ್ರಾ ತಾನುಎರಗಿದಳುಭಾವೆಚರಣಕ್ಕೆಎರಗಿದಳುಭಾವೆಚರಣಕ್ಕೆ ರುಕ್ಮಿಣಿಯಪರಮಆಶೀರ್ವಾದ ಇರಲೆಂದು3

ಅತ್ತಿಗೆಯರೆಂದು ಅರ್ಥಿಲಾಡಿದ ಮಾತುಮತ್ತೊಂದು ನೀವು ತಿಳಿಯದೆಮತ್ತೊಂದು ನೀವು ತಿಳಿಯದೆ ರಂಗನಮಿತ್ರೆಯರೆ ನಿಮ್ಮ ದಯವಿರಲಿ 4

ಬಂದು ಪಾಂಡವರೆಲ್ಲ ಇಂದಿರೇಶಗೆ ಎರಗಿಚಂದಾಗಿ ತಾವು ಕೈ ಮುಗಿದುಚಂದಾಗಿ ತಾವು ಕೈ ಮುಗಿದು ನುಡಿದರುಕುಂದುಗಳೆಣಿಸದೆ ಸಲುಹೆಂದು 5

ಭಾವಮೈದುನತನದಿ ನಾವೊಂದು ವಿನಯದಿಯಾವ ತಪ್ಪುಗಳ ಎಣಿಸದೆಯಾವ ತಪ್ಪುಗಳ ಎಣಿಸದೆ ಶ್ರೀ ಕೃಷ್ಣದೇವ ನೀ ಮಾಡೊ ದಯವನೆ 6

ತಂದೆ ರಾಮೇಶಗೆ ನಾವಂದ ಮಾತುಗಳೆಲ್ಲಕುಂದವ ಮಾಡಿ ಬಗೆಯದೆಕುಂದವ ಮಾಡಿ ಬಗೆಯದೆ ನಮ್ಮನೆಗೆಬಂದು ಬಂದೊಮ್ಮೆ ಸಲುಹಯ್ಯ 7
*******