ರಾಗ ಶಂಕರಾಭರಣ ಅಟತಾಳ
ಕೊಡಬಹುದೇ ಮಗಳ ||ಪ||
ಹಿಡಿಬಿಟ್ಟಿಯನೆ ಮಾಡಿ ಹೀಗೆ ಸಮುದ್ರರಾಯ ||ಅ||
ಕುರುಹು ಖೂನಗಳಿಲ್ಲ , ಕೂಟ ಮಠಗಳಿಲ್ಲ
ಅರಿಯರು ಆರಾರು ಆರ ಮಗನೆಂದು
ಅರಸರ ಹೆಸರಿಗೆ ಸರಿಯಾದ ಅಳಿಯನಲ್ಲ
ವರಸುಖಾಂಗಿಗೆ ತಕ್ಕ ವರನಹುದೆ ಇವ
ಹಿರಿಯರೆಂಬುವರಾ ನೆರೆಹೊರೆಯ ಕಾಣದವ
ವರಪುಟ್ಟತನದಲ್ಲಿ ಬಂಟರಿಗೆ ಖಳನಿವ
ಹಿರಿದು ಬಲ್ಲಿದ ನಾಲ್ಕು ಹಸ್ತವುಳ್ಳವನಿವ
ನಿರತ ಮೇಘ ಪೋಲ್ವ ಕರಿಯ ಮೈಯವನಿವ
ಅರುಣ ಛಾಯದ ರೇಖೆಗಳುಳ್ಳ
ನರಸಿಂಹ ಹಾರುವ ಹದ್ದಿನ ಮೆಚ್ಚಿದ
ಉರದ ಮೇಲೆ ಭರದಿ ಒದೆಯ ಮೆಚ್ಚಿದ
ಕರೆದ ಹಾಲು ದೊರೆಯೆ ಕುಡಿದು ಹೆಚ್ಚಿದ
ಬ್ರಹ್ಮಾಂಡವ ತೋರಿಸಿ ವದನವ ಮುಚ್ಚಿದ
ಅನೇಕಾದಿ ನಾರಿಯರ ಶ್ಯಾಲೆಗಳನು ಬಿಚ್ಚಿದವಗೆ ||
ಆಡಿಸಿ ಆಡಿಸಿ ಹತ್ತು ಅವತಾರದಿ ಪುಟ್ಟಿ
ಕಡು ಕಪಟಿಯಲ್ಲದೆ ಭೂರಿಗುಣವಗಿಲ್ಲ
ನಡತೇಲಿ ಸಲೆ ಲಜ್ಜೆ ನಾಚಿಕೆ ಇವಗಿಲ್ಲ
ಹಿಡಿದು ಪೂತನಿ ಮೊಲೆಯುಂಡ ಚೊಕ್ಕಟ ಮಲ್ಲ
ಕೆಡಹಿದ ಮಾವನ ಕೊಲೆಗಡುಕನು ಸಲ್ಲ
ಹುಡುಕಬಂದರೆ ತಾನಡಗಬಲ್ಲ
ಹಿಡಿಬಿಟ್ಟಿಯನೆ ಮಾಡಿ ಭೂತಳದೊಳಗೆಲ್ಲ
ಮಡದಿಯರ ಸೀರೆಯ ಕದ್ದದ್ದು ಪುಸಿಯಲ್ಲ
ಕಡಹದ ಮರನೇರಿದ ಹೆಂಗಳ ಶಿರ-
ದಡಿಯೊಳು ಭಂಗವ ಮಾಡಿದ ಕಿರಾತನ್ನ
ಕೊಡೆಯ ಬೆಟ್ಟಗಳಾಡಿದ ಕಾಳಿಂಗನ
ಮಡುವ ಧುಮುಕಿ ನೋಡಿದ ವ್ಯಾಳನ , ಏಳು
ಹೆಡೆಗಳ ಮೇಲೆ ತುಳಿದ ಫಣಿಪನ
ಪೊಡವಿ ಈರಡಿ ಮಾಡಿದ, ರಥಂಗಳ
ನಡೆಸಿ ನರಗೆ ಸಾರಥಿಯಾದ ||
ಆದರದಿಂದಲಿ ಕೊಳಲನೂದುತ ಗೋವುಗಳ
ಕದಾಗ ಅಡವಿಯೊಳು ಸಾಧುಗೆ ಮಿಡಿ ಯಾರೊ
ಈ ಧರೆಯೊಳಗಿವ ಪಿಡಿದನು ಕಾಳಿಯ
ಯಾದವರಾಯ ಎಡೆಯಂಜಲುಂಬವನಿವ
ಆದಿ ಅನಾದಿ ಅಂತ್ಯವಿಲ್ಲದೆ ಒಲಿವ ನಾಮ
ಕ್ರೋಧದಿಂದಲಿ ಭಟರನ ಕೊಂದು ಕೂಗುತಲಿಹ
ಮೋದದಿ ವೀರರೊಳು ಮೆರೆವಾ ಎಣಿಸಿದರಿನ್ನು
ಆದಿನಿರ್ಜರಾಗುವ ಪಾಲಿಪನು ಸನಕಾದಿಗಳ
ಪೊರೆವ ಹೃದಯ ಮೊದಲಿದ್ದು ಶ್ರೀದೇವಿಯಿಂದಲಿ ಮೆರೆವ
ಶೇಷಾಚಲನಾದ ವಿನೋದಿಯಾ ಪುರಂದರವಿಠಲಗೆ ||
***
ಕೊಡಬಹುದೇ ಮಗಳ ||ಪ||
ಹಿಡಿಬಿಟ್ಟಿಯನೆ ಮಾಡಿ ಹೀಗೆ ಸಮುದ್ರರಾಯ ||ಅ||
ಕುರುಹು ಖೂನಗಳಿಲ್ಲ , ಕೂಟ ಮಠಗಳಿಲ್ಲ
ಅರಿಯರು ಆರಾರು ಆರ ಮಗನೆಂದು
ಅರಸರ ಹೆಸರಿಗೆ ಸರಿಯಾದ ಅಳಿಯನಲ್ಲ
ವರಸುಖಾಂಗಿಗೆ ತಕ್ಕ ವರನಹುದೆ ಇವ
ಹಿರಿಯರೆಂಬುವರಾ ನೆರೆಹೊರೆಯ ಕಾಣದವ
ವರಪುಟ್ಟತನದಲ್ಲಿ ಬಂಟರಿಗೆ ಖಳನಿವ
ಹಿರಿದು ಬಲ್ಲಿದ ನಾಲ್ಕು ಹಸ್ತವುಳ್ಳವನಿವ
ನಿರತ ಮೇಘ ಪೋಲ್ವ ಕರಿಯ ಮೈಯವನಿವ
ಅರುಣ ಛಾಯದ ರೇಖೆಗಳುಳ್ಳ
ನರಸಿಂಹ ಹಾರುವ ಹದ್ದಿನ ಮೆಚ್ಚಿದ
ಉರದ ಮೇಲೆ ಭರದಿ ಒದೆಯ ಮೆಚ್ಚಿದ
ಕರೆದ ಹಾಲು ದೊರೆಯೆ ಕುಡಿದು ಹೆಚ್ಚಿದ
ಬ್ರಹ್ಮಾಂಡವ ತೋರಿಸಿ ವದನವ ಮುಚ್ಚಿದ
ಅನೇಕಾದಿ ನಾರಿಯರ ಶ್ಯಾಲೆಗಳನು ಬಿಚ್ಚಿದವಗೆ ||
ಆಡಿಸಿ ಆಡಿಸಿ ಹತ್ತು ಅವತಾರದಿ ಪುಟ್ಟಿ
ಕಡು ಕಪಟಿಯಲ್ಲದೆ ಭೂರಿಗುಣವಗಿಲ್ಲ
ನಡತೇಲಿ ಸಲೆ ಲಜ್ಜೆ ನಾಚಿಕೆ ಇವಗಿಲ್ಲ
ಹಿಡಿದು ಪೂತನಿ ಮೊಲೆಯುಂಡ ಚೊಕ್ಕಟ ಮಲ್ಲ
ಕೆಡಹಿದ ಮಾವನ ಕೊಲೆಗಡುಕನು ಸಲ್ಲ
ಹುಡುಕಬಂದರೆ ತಾನಡಗಬಲ್ಲ
ಹಿಡಿಬಿಟ್ಟಿಯನೆ ಮಾಡಿ ಭೂತಳದೊಳಗೆಲ್ಲ
ಮಡದಿಯರ ಸೀರೆಯ ಕದ್ದದ್ದು ಪುಸಿಯಲ್ಲ
ಕಡಹದ ಮರನೇರಿದ ಹೆಂಗಳ ಶಿರ-
ದಡಿಯೊಳು ಭಂಗವ ಮಾಡಿದ ಕಿರಾತನ್ನ
ಕೊಡೆಯ ಬೆಟ್ಟಗಳಾಡಿದ ಕಾಳಿಂಗನ
ಮಡುವ ಧುಮುಕಿ ನೋಡಿದ ವ್ಯಾಳನ , ಏಳು
ಹೆಡೆಗಳ ಮೇಲೆ ತುಳಿದ ಫಣಿಪನ
ಪೊಡವಿ ಈರಡಿ ಮಾಡಿದ, ರಥಂಗಳ
ನಡೆಸಿ ನರಗೆ ಸಾರಥಿಯಾದ ||
ಆದರದಿಂದಲಿ ಕೊಳಲನೂದುತ ಗೋವುಗಳ
ಕದಾಗ ಅಡವಿಯೊಳು ಸಾಧುಗೆ ಮಿಡಿ ಯಾರೊ
ಈ ಧರೆಯೊಳಗಿವ ಪಿಡಿದನು ಕಾಳಿಯ
ಯಾದವರಾಯ ಎಡೆಯಂಜಲುಂಬವನಿವ
ಆದಿ ಅನಾದಿ ಅಂತ್ಯವಿಲ್ಲದೆ ಒಲಿವ ನಾಮ
ಕ್ರೋಧದಿಂದಲಿ ಭಟರನ ಕೊಂದು ಕೂಗುತಲಿಹ
ಮೋದದಿ ವೀರರೊಳು ಮೆರೆವಾ ಎಣಿಸಿದರಿನ್ನು
ಆದಿನಿರ್ಜರಾಗುವ ಪಾಲಿಪನು ಸನಕಾದಿಗಳ
ಪೊರೆವ ಹೃದಯ ಮೊದಲಿದ್ದು ಶ್ರೀದೇವಿಯಿಂದಲಿ ಮೆರೆವ
ಶೇಷಾಚಲನಾದ ವಿನೋದಿಯಾ ಪುರಂದರವಿಠಲಗೆ ||
***
pallavi
kodabahudE magana
anupallavi
hiDibiDyane mATi hIge samudrarAya
caraNam 1
guruhu gUnagaLilla kUDa maDagaLilla ariyaru ArAru Ara maganendu
arasara hesarige sariyAda aLiyanilla varasukhAnkige takka varanahude iva
hariyembuvarA nerehoreya kANadava vara puTTatanadalli baNDarige ghaLaniva
hiridu ballida nAlgu hastavuLLavaniva nirata mEghava pOva kariya maiyavaniva
aruNachAyada rEkhegaLuLLa narasimha hAruva haddina meccida
brahmANDava tOrisi vadanava muccida anEkAdi nAriyara sAlegaLanu biccidavage
caraNam 2
ADisi Adisi hattu avatAradi puTTi kaDu kapaTeyallade bhUri guNavagilla
naDatEli sale lajje nacikeyivagilla hiDidu pUtani moleyuNDa cokkaTa malla keDahida
mAvana kolegaDukanu salla huDuga bandare tAnaDagaballa hiDibiTTiyane mADi
bhUtaLa doLagella maDadiyara sIreya kaddaddu pusiyalla kaDahada maranErida
engaLa shira daDiyoLu bhangava mADida kirAtanna koDeya baTTagaLADida
kALingana maDuva dhumuki nODida vyALana Elu heDegaLa mEle tuLida ghaNIpana
poDavi IraDi mADida rathangaLa naDesi narage karuNadi sArathiyAda
caraNam 3
Adaradindali koLalanUduta gOvugaLa kAdAga aDaviyoLu sAdhuge miDi yArO
I dhareyoLagiva piDidanu kALiya yAdavarAya eDeyenjalumbuvaniva
Adi anAdi antyavillade oliva nAma krOdhadindali bhaTarana kondu kUgutaliha
mOdadi vIraroLu merevA eNisidarinnu Adi nirjararAguva pAlipanu sanakAdigaLa poreva
hrdaya modaliddu shrIdEviyindali mereva shESAcalanAda vinOdiyA purandara viTTalage
***