Showing posts with label ಭಕುತರ್ಗೆ ಭಯಬಾರದು ಸುಖವೀವ ಕಾವದೇವನಕಾಕುಜನರಿಂದ hayavadana. Show all posts
Showing posts with label ಭಕುತರ್ಗೆ ಭಯಬಾರದು ಸುಖವೀವ ಕಾವದೇವನಕಾಕುಜನರಿಂದ hayavadana. Show all posts

Wednesday, 1 September 2021

ಭಕುತರ್ಗೆ ಭಯಬಾರದು ಸುಖವೀವ ಕಾವದೇವನಕಾಕುಜನರಿಂದ ankita hayavadana

 ..

ಭಕುತರ್ಗೆ ಭಯಬಾರದು ಸುಖವೀವ ಕಾವದೇವನಕಾಕುಜನರಿಂದ ಬಂದಾನೇಕ ಶೋಕಂಗಳ ಕಳೆವÀಶ್ರೀರಂಗನ ದೇವೋತ್ತುಂಗನ ಭವಭಂಗನ ಪ.


ಹಿರಣ್ಯಕನುದರ ವಿದಾರಣನ ಸ್ವಚರಣಕರಣ ಪ್ರಹ್ಲಾದನ ಭಯನಿವಾರಣನಕರಿವರ ಕರೆಯೆ ಮಕರಿಯ ಸೀಳಿದ ಸಿರಿಯನಾಳಿದಪಿರಿಯ ಶ್ರೀಹರಿಯ ಧೂರ್ತಾರಿಯ ಬಕವೈರಿಯ 1


ಯತಿಕುಲಪತಿಯ ಮಧ್ವಾಚಾರ್ಯರಕೃತಿಯಾಶ್ವರ್ಯ ಚಾತುರ್ಯಕೊಲಿದನಸತಿ ಸಭೆಯಲ್ಲಿ ಸಿರಿಪತಿ ನೀನೆ ಗತಿಯೆನೆಅತಿ ದೂರದಿಂದಕ್ಷಯವೆಂದ ಗೋವಿಂದನ ಮುಕುಂದನ2


ಕಂಕಣ ಕುಂಡಲ ಮಕುಟ ಪಾದುಕಾ ಹಾರಕಿಂಕಿಣಿ ಕೌಸ್ತುಭ ನೂಪುರ ಮೊದಲಾದ-ಲಂಕೃತಿಯಿಂದೊಪ್ಪುವ ನೀಲಗಾತ್ರನಪಂಕಜನೇತ್ರನ ಪರಮಪವಿತ್ರನ ಸುಚರಿತ್ರನ ಸುರಮಿತ್ರನ 3


ಗುರುವೆಂದರಿವ ಹರಿಯೆಂದು ಕರೆವ ತ-ಮ್ಮಿರವ ಮರೆವ ಸದ್ಗುಣ ವಿಸ್ತಾರವ-ನ್ನೊರೆವ ನಯನದಿ ಸುರಿವ ಪರಿವ ಸುಖಾಂಬುಧಿಕರೆವ ತೋರುವ ಖಳನಿರವ ಮುಕ್ತಿಗೆ ಕೂರುವ 4


ಹರಿಯನೆ ಪಾಡುವ ಹರಿಯ ಕೊಂಡಾಡುವಹರಿಯ ನೋಡುವ ಹರಿಯನೆ ಬೇಡುವದುರುಳರ ಕಾಡುವ ತಪದಿಂ ಬಾಡುವದುರಿತವ ಬಿಡುವ ಸುಕೃತವನೆ ಕೊಡುವ ಪಾಡಪಾಡುವ ನಲಿದಾಡುವ 5


ಹರಿಯನೆ ಸ್ಮರಿಸುವ ಹರಿಯನನುಸರಿಸುವಹರಿಯನೆ ಪರಿಹರಿಸುವ ಹರಿಯನೆಬೆರಿಸುವಹರಿಯನೆ ತೋರಿಸುವ ಹರಿಯನೆ ಮರೆಸುವಹರಿಪಾದಕೇರಿಸುವ ಸುಖರಸವ ಎರೆಸುವ 6


ಒಂದು ಕೈಯಲಿ ಕಡೆಗೋಲನೆ ಪಿಡಿದು ಮ-ತ್ತೊಂದು ಕೈಯಲಿ ನೇಣನಾಂತ ಶ್ರೀಕಾಂತನಮುಂದೆ ನಿಂದು ಒಲಿವುತ್ತ ನಲಿವುತ್ತತಂದೆ ಹಯವದನನರ್ಚಿಸುವ ಮೆಚ್ಚಿಸುವ ಹೆಚ್ಚಿಸುವ 7

***