ಸಾಹಿತ್ಯ : ಅಕ್ಕ ಮಹಾದೇವಿ
||ಅಕ್ಕ ಕೇಳವ್ವ ಅಕ್ಕಯ್ಯ ಕೇಳವ್ವ||
||ಕೇಳವ್ವ ನಾನೊಂದು ಕನಸ ಕಂಡೆ||
||ಅಕ್ಕಿ ಅಡಕೆ ಓಲೆ
ತೆಂಗಿನಕಾಯಿ ಕಂಡೆ||
||ಕೇಳವ್ವ ನಾನೊಂದು ಕನಸ ಕಂಡೆ||
||ಚಿಕ್ಕ ಚಿಕ್ಕ ಜಡೆಗಳ
ಸುಳಿಪಲ್ಲ ಗೊರವನು||
||||||||ಭಿಕ್ಷಕ್ಕೆ ಮನೆಗೆ ಬಂದುದ ಕಂಡೆನವ್ವ||
||ಕೇಳವ್ವ ನಾನೊಂದು ಕನಸ ಕಂಡೆ||
||ಮಿಕ್ಕು ಮೀರಿ ಹೋಹನ
ಬೆಂಬತ್ತಿ ಕೈಪಿಡಿದೆ||
||||||||ಚೆನ್ನ ಮಲ್ಲಿಕಾರ್ಜುನನ ಕಂಡು ನಾ ಕಣ್ತೆರೆದೆ||
||ಕೇಳವ್ವ ನಾನೊಂದು ಕನಸ ಕಂಡೆ||
||ಅಕ್ಕ ಕೇಳವ್ವ ಅಕ್ಕಯ್ಯ ಕೇಳವ್ವ||
||ಕೇಳವ್ವ ನಾನೊಂದು ಕನಸ ಕಂಡೆ||
||ಅಕ್ಕಿ ಅಡಕೆ ಓಲೆ
ತೆಂಗಿನಕಾಯಿ ಕಂಡೆ||
||ಕೇಳವ್ವ ನಾನೊಂದು ಕನಸ ಕಂಡೆ||
***
akkā kēḷavvā nānoṅda kanasa kanḍé
akki aḍaké tenginakāyiya kanḍé
cikka cikka jaḍégaḷa sulipalla goravanu
bhikṣakké manégé banduda kanḍénavvā
mikku meerihōhana bembatti kaiviḍidénu
cénnamallikārjunayyana kanḍu kaṇdérédénu!
***
just scroll down for other devaranama