Showing posts with label ಮಾಯದ ಮಾತೆಲ್ಲ ಸುಳ್ಳದೆ ಖರೆಯಾಗಿ ನಿಂತದೆ shivarama. Show all posts
Showing posts with label ಮಾಯದ ಮಾತೆಲ್ಲ ಸುಳ್ಳದೆ ಖರೆಯಾಗಿ ನಿಂತದೆ shivarama. Show all posts

Friday, 6 August 2021

ಮಾಯದ ಮಾತೆಲ್ಲ ಸುಳ್ಳದೆ ಖರೆಯಾಗಿ ನಿಂತದೆ ankita shivarama

 ..

Kruti by ಶಿವರಾಮರು Shivaramaru


ಮಾಯದ ಮಾತೆಲ್ಲ | ಸುಳ್ಳದೆ | ಖರೆಯಾಗಿ ನಿಂತದೆ ಪ


ಗಂಧರ್ವಪುರದಿಂದ | ನೋಡಮ್ಮಾ | ಬಂಜೆಯ ಮಗತಾ ಬಂದು | ಭೀಷ್ಮನ ಮಗಳಿಗೆ | ಮದುವ್ಯಾದ 1


ಸೊಂಟನ ಕೈಯಿಂದ | ನೋಡಮ್ಮಾ | ಗಗನ ಪುಷ್ಪವ ತರಿಸಿ |ಕೊರಳೊಳು | ಮಾಲೆಯ ಹಾಕಿದರಂತೆ 2


ಪರ್ವತ ಕೊನೆ ಮೇಲೆ | ನೋಡಮ್ಮಾ | ಮೃಗಜಲ ನದಿಯಂತೆ |ಅದರೊಳು | ಕಲ್ಲಿನ ಹರಗೋಲಂತೆ 3


ಮೊಲವೆದ್ದು ಇರಿಯಲ್ಕೆ | ನೋಡಮ್ಮ | ಹರಗೋಲನ ಹರಿದು | ಒಳಗಿದ್ದ ಬಂಜಿಯ ಮಗ ಹರಿದ್ಹೋದಾ 4


ಮೀನುಗಳಿಷ್ಟೂ ಕಂಡೂ | ನೋಡಮ್ಮ | ಶವ ತೆಗೆದು ಹೊರಗ್ಹಾಕಿ | ವನಕೊಯ್ದು | ದಹನವ ಮಾಡಿದವಂತೆ 5


ಇಷ್ಟು ಕುರುಡಾ ಕಂಡಾ | ನೋಡಮ್ಮಾ | ಹೆಳವಾ ಹೇಳಲಿ ಬಂದಾ | ಕಿವುಡನಿಗೆ | ಮೂಕ ಹೇಳಿದನಂತೆ 6


ಈ ಪರಿ ಸಂಸಾರ ನೋಡಮ್ಮಾ | ಮಾಯದ ವಿಸ್ತಾರ | ಶಿವರಾಮಾ ತಾ | ಕೇಳಿ ಬೆರಗಾದಾ 7

***