ಮುಸುರೆ ತೊಳೆಯಬೇಕು, ಈ ಮನಸಿನ
ಮುಸುರೆ ತೊಳೆಯಬೇಕು |||ಪ||
ಮುಸುರೆ ತೊಳೆಯಬೇಕು , ಗುಸುಗುಸು ಬಿಡಬೇಕು
ಈಶಪ್ರೇರಣೆಯೆಂಬೊ , ಹಸಿಯ ಹುಲ್ಲನು ಹಾಕಿ ||
ಅಷ್ಟಮದದಿಂದ ಸುಟ್ಟ ಈ ಪಾತ್ರೆಯ
ವಿಷ್ಣು ನಾಮವೆಂಬೊ ಕೃಷ್ಣಾ ನದಿಯಲ್ಲಿ ||
ಕಾಮ ಕ್ರೋಧದಿಂದ ಬೆಂದ ಈ ಪಾತ್ರೆಯ
ರಾಮ ಕೃಷ್ಣನೆಂಬೊ ಹೇಮಾ ನದಿಯಲ್ಲಿ ||
ವಿಷವೆಂಬೊ ಪಾತ್ರೆಯ ಮುಸುರೆ ತೊಳದಿಟ್ಟು
ಬಿಸಜಾಕ್ಷ ಪುರಂದರವಿಠಲಗರ್ಪಿಸೋ ನಿತ್ಯ ||
****
ರಾಗ ಧನಶ್ರೀ ಮಟ್ಟೆ ತಾಳ (raga, taala may differ in audio)
pallavi
musure toLeyabhEku I manasina musure toLeyabhEku
anupallavi
musure toLeyabhEku kusukusu biDa bhEku Isha prEraNeyembo hasiya hullanu hAki
caraNam 1
aSTamadadinda suTTa I pAtreya viSNu nmavembo krSNA nadiylli
caraNam 2
kAma krOdhadnda benda I pAtreya rAma krSNanembo hEmA nadiyalli
caraNam 3
viSavembo pAtreya musure toLadiTTu bisajAkSa purandara viTTala garpisO nitya
***
ಶ್ರೀ ಪುರಂದರದಾಸರ ಕೃತಿ ..ಮುಸುರೆ ತೊಳೆಯಬೇಕು..
ಸಂಗೀತ ಪಿತಾಮಹ ಶ್ರೀ ಪುರಂದರದಾಸರ ಆರಾಧನೆ ಇದೇ ಬುಧವಾರ . 475000 ಹಾಡುಗಳ ರಚನೆ ಮಾಡಿದ್ದಾರೆ . ಆದರೆ ನಮಗೆ ದೊರಕಿರುವುದು ಅಂದಾಜು 5000 ಮಾತ್ರ . ನಾವೆಷ್ಟು ತಯಾರಾಗಿದ್ದೇವೆ ಅವರ ಹಾಡುಗಳ , ಉಗಾಭೋಗ ಗೆಜ್ಜೆ ಕಟ್ಟಿ ಕುಣಿದು ನಲಿಯು ವುದಕ್ಕೆ. ಬುತ್ತಿಯ ಕಟ್ಟೂ ಮನುಜ ... ಬುತ್ತಿಯನ್ನು ಕಟ್ಟಿದರೆ ಎತ್ತಲಾದರೂ ಉಣ ಬಹುದು. .. ಹೆಂಡತಿ ಸಂತತಿ ಸಾವಿರ ವಾಗಲಿ ದಂಡಿಗೆ ಬೆತ್ತ ಹಿಡಿಸಿದಳಯ್ಯ....ಹೆಂಡತಿ ಪ್ರಾಣ ಹಿಂಡುತಿ... ಈ ಪರಿಯ ಸೊಬಗು ಇನ್ಯಾವ ದೇವರಲ್ಲಿ ನಾ ಕಾಣೆ ...
ಈ ಕೀರ್ತನೆಯ ಸ್ವಲ್ಪ ಅರ್ಥ ನೋಡೋಣ ..
ತೊಳೆಯಬೇಕು ಈ ಮನಸಿನ
ಮುಸುರೆ ತೊಳೆಯಬೇಕು
ಮುಸುರೆ ತೊಳೆಯಬೇಕು ಗುಸುಗುಸು ಬಿಡಬೇಕು l
ಈಶ ಪ್ರೇರಣೆಯೆಂಬೊ ಹಸಿಯ ಹುಲ್ಲನು ಹಾಕಿ ll
ಅಷ್ಟ ಮದದಿಂದ ಸುಟ್ಟ ಈ ಪಾತ್ರೆಯ l
ವಿಷ್ಣುನಾಮವೆಂಬೊ ಕೃಷ್ಣಾನದಿಯಲ್ಲಿ ll
ಕಾಮಕ್ರೋಧದಿಂದ ಬೆಂದ ಈ ಪಾತ್ರೆಯ l
ರಾಮಕೃಷ್ಣರೆಂಬೊ ಹೇಮಾನದಿಯಲ್ಲಿ ll
ವಿಷವೆಂಬೊ ಪಾತ್ರೆಯ ಮುಸುರೆ ತೊಳೆದಿಟ್ಟು l
ಬಿಸಜಾಕ್ಷ ಪುರಂದರವಿಠಲಗರ್ಪಿಸೊ ನಿತ್ಯ ll
ಮುಸುರೆ ತೊಳೆಯಬೇಕು ಹೃದಯದ ಮುಸುರೆ ತೊಳೆಯಬೇಕು.ಭಗವಂತನನ್ನು ಮಂದಿರದಲ್ಲೋ ಗೋಪುರದಲ್ಲೋ ಹುಡುಕುವ ಅಗತ್ಯವಿಲ್ಲ. ಪ್ರತಿಯೊಬ್ಬರ ಹೃದಯಮಂದಿರವೂ ಆತನ ಆವಾಸಸ್ಥಾನವೇ. ಆದರೆ ಅವನ ವಾಸ ನಿರಂತರ ವಾಗಿರಬೇಕೆಂದರೆ, ಕಲ್ಮಶಗಳು ಸೇರಿ ಕೊಳ್ಳದಂತೆ ಈ ಮಂದಿರವನ್ನು ನಾವು ಶುಭ್ರವಾಗಿ ಚೊಕ್ಕಟವಾಗಿಟ್ಟು ಕೊಳ್ಳಬೇಕು.
ಒಂದು ಖಾಲಿ ಪಾತ್ರೆ ಇದ್ದರೆ ನಮಗೆ ಬೇಕಾದುದನ್ನು ಅದರಲ್ಲಿ ತುಂಬಿಕೊಳ್ಳಬಹುದು. ಆದರೆ, ಏನು ತುಂಬುತ್ತೇವೆ ? ಏನು ತುಂಬಬೇಕು ? ಎಂಬುದು ಬಹಳ ಮುಖ್ಯ. ಹೃದಯವೂ ಹೀಗೆಯೇ; ಒಳ್ಳೆಯ ಸಂಗತಿಗಳು ಎಷ್ಟಿದ್ದರೂ ಹೃದಯದಲ್ಲಿ ಅವಕ್ಕೆ ಜಾಗ ಇದ್ದೇ ಇರುತ್ತದೆ. ನಾವು ಭಗವಂತನಿಗೆ ಹತ್ತಿರ ವಾಗಬೇಕು. ಆತ ನಮ್ಮ ಹೃದಯನಿವಾಸಿ ಯಾಗಬೇಕು ಎಂದರೆ ನಮ್ಮ ಹೃದಯ ಖಾಲಿಯಿರಬೇಕು = ಶುಭ್ರವಾಗಿ ಚೊಕ್ಕಟವಾಗಿಟ್ಟು ಕೊಳ್ಳಬೇಕು.
(whatsapp)
***