ಶ್ರೀ ಪ್ರಸನ್ನವೆಂಕಟದಾಸರ ನವ ವಿಧ ಭಕ್ತಿ ಕೀರ್ತನೆಗಳು
೩ . " ಸ್ಮರಣ ಭಕ್ತಿ "
ರಾಗ : ತೋಡಿ ( ಕರ್ನಾಟಕ ) ರೂಪಕತಾಳ
ಶ್ರೀ ವಿಷ್ಣು ಸ್ಮರಣೆಯಿಂ ಸಾಧುಸಂಸರ್ಗ
ಶ್ರೀ ವಿಷ್ಣು ಸ್ಮರಣೆಯಿಂಬುದೆ ಅಪವರ್ಗ ॥ಪ॥
ಶ್ರೀ ವಿಷ್ಣು ಸ್ಮರಣೇಲಿ ಸದ್ಭುದ್ಧಿ ದೀರ್ಘ
ಶ್ರೀ ವಿಷ್ಣು ಸ್ಮರಣೆಗೆಚ್ಚರ ಬುಧವರ್ಗ ॥ಅ.ಪ॥
ಶೀತಲವಾಯ್ತು ಹಲಾಹಲ ಹರಗೆ
ಮಾತೆ ದ್ರೌಪತಿ ಲಜ್ಜೆ ಕಾಯಿತು ಮರುಗೆ
ಪಾತಕಿಯಜಮಿಳನ ಪಾಪವು ಕರಗೆ
ಪೂತರಾಗ್ವರು ಸುಜನರು ಒಳಹೊರಗೆ ॥೧॥
ಸಿರಿಯರ್ಥ ಮಾಡಲಚ್ಚರವಾದ ಸ್ಮರಣೆ
ಪರಸೋದ್ವಾಪರಿಯೆಂಬುವಾ ಗುಹ್ಯಸ್ಮರಣೆ
ವಿರಿಂಚಿಗೆ ತೃಪ್ತಿಯಾಗದ ನಾಮಸ್ಮರಣೆ
ಉರಗೇಶನ ಜಿಹ್ವಗೆ ನಿಲುಕದ ಸ್ಮರಣೆ ॥೨॥
ತ್ಯಾಗಭೋಗಯೋಗ ಛಿದ್ರಮುಚ್ಚುವುದು
ಭೂಗಗನಸ್ಥರ ಪುಣ್ಯ ಹೆಚ್ಚುವುದು
ಕೂಗ್ಯಾಡಿ ಕುಣಿವರಾನಂದ ಫಲವಿದು
ಶ್ರೀಗಂಗಾಜನಕನ ತಂದು ತೋರುವುದು ॥೩॥
ಭೂಪ್ರದಕ್ಷಿಣೆ ತೀರ್ಥಯಾತ್ರೆಗೆ ಮಿಗಿಲು ಆ-
ಸಂಪ್ರಾಜ್ಞಾತಸ್ಥರಿಗೆ ಹರಗೋಲು
ಸುಪ್ರಾಪ್ತ ಮುಕ್ತರುಂಬಮೃತಕಣಗಳು
ಶ್ರೀಪ್ರಾಣನಾಥನ ನಾಮಾವಳಿಗಳು ॥೪॥
ಸ್ವಾದನ್ನದೊಟ್ಟಿಲು ಹರಿನಾಮ ಸ್ಮರಣೆ
ಮಧ್ವಶಾಸ್ತ್ರಜ್ಞರ ವಚನಾಗ್ನಿ ಗರಣಿ
ಅದ್ವೈತಮತಧ್ವಾಂತಕ್ಕುದಿತ ಸತ್ತರಣಿ ಶ್ರೀ-
ಮದ್ವಿಷ್ಣು ಪ್ರಸನ್ವೆಂಕಟನ ಸ್ಮರಣೆ ॥೫॥
***
by ಪ್ರಸನ್ನವೆಂಕಟದಾಸರು
ಶ್ರೀ ವಿಷ್ಣು ಸ್ಮರಣೆಯಿಂ ಸಾಧು ಸಂಸರ್ಗಶ್ರೀ ವಿಷ್ಣು ಸ್ಮರಣೆಯೆಂಬುದೆಅಪವರ್ಗಶ್ರೀ ವಿಷ್ಣು ಸ್ಮರಣೆಲಿ ಸದ್ಬುದ್ಧಿ ದೀರ್ಘಶ್ರೀ ವಿಷ್ಣು ಸ್ಮರಣೆಗೆಚ್ಚರ ಬುಧವರ್ಗ ಪ.
ಶೀತಲವಾಯ್ತುಹಾಲಾಹಲಹರಗೆಮಾತೆ ದ್ರೌಪದಿ ಲಜ್ಜೆ ಕಾಯಿತು ಮರುಗೆಪಾತಕಿಅಜಾಮಿಳನ ಪಾಪವು ಕರಗೆಪೂತರಾಗ್ವರು ಸುಜನರು ಒಳಹೊರಗೆ 1
ಸಿರಿಅರ್ಥ ಮಾಡಲಚ್ಚರವಾದ ಸ್ಮರಣೆಪರಸೋದ್ವಾಪರಿಯೆಂಬುವ ಗುಹ್ಯಸ್ಮರಣೆವಿರಿಂಚಿಗೆ ತೃಪ್ತಿಯಾಗದ ನಾಮಸ್ಮರಣೆಉರಗೇಶನ ಜಿಹ್ವೆಗೆ ನಿಲುಕದ ಸ್ಮರಣೆ 2
ತ್ಯಾಗಭೋಗಯೋಗ ಛಿದ್ರ ಮುಚ್ಚುವುದುಭೂಗಗನಸ್ಥರ ಪುಣ್ಯ ಹೆಚ್ಚುವುದುಕೂಗ್ಯಾಡಿ ಕುಣಿವರಾನಂದ ಫಲವಿದುಶ್ರೀ ಗಂಗಾಜನಕನ ತಂದು ತೋರುವುದು 3
ಭೂಪ್ರದಕ್ಷಿಣೆ ತೀರ್ಥಯಾತ್ರೆಗೆ ಮಿಗಿಲು ಅಸಂಪ್ರಜ್ಞಾತಸ್ಥರಿಗೆ ಹರಿಗೋಲುಸುಪ್ರಾಪ್ತ ಮುಕ್ತರುಂಬಮೃತ ಕಣಗಳುಶ್ರೀ ಪ್ರಾಣನಾಥನ ನಾಮಾವಳಿಗಳು 4
ಸ್ವಾದನ್ನದೊಟ್ಟಿಲು ಹರಿನಾಮಸ್ಮರಣೆಮಧ್ವಶಾಸ್ತ್ರಜÕರ ವಚನಾಗ್ನಿಗೆ ಅರಣಿಅದ್ವೈತಮತಧ್ವಾಂತಕ್ಕುದಿತ ಸತ್ತರಣಿ ಶ್ರೀಮದ್ವಿಷ್ಣು ಪ್ರಸನ್ವೆಂಕಟನ ಸ್ಮರಣೆ 5
***