ಕಂಜಾಕ್ಷ ಕಾಯಯ್ಯ ಕರುಣಾನಿಧಿಯೆ
ಬಲಭಂಜನನನುಜನೆ ನೋಡೆನ್ನ ಪ .
ಅಂಜದೆ ನಾ ನಿನ್ನ ಅಡಿಳಿಗೆರಗುವೆಕುಂಜರವರದನೆ ಕೂಡೆನ್ನ ಅ.ಪ.
ನೀನೊಲಿದಾಗಲೆ ನಿಖಿಳ ಸಂಪದ ತನ್ನಿಂ-ತಾನೆ ಬಹುದು ತಡವಿಲ್ಲಆ ನಳಿನಭವಾದ್ಯಮರರಿದಕೆ ಸಾಕ್ಷಿಭಾನುಸನ್ನಿಭ ಬಾರೊ ನಲ್ಲ1
ಪುಂಡರೀಕಾಕ್ಷನ ಪೂಜಿಪ ಭಕ್ತರಮಂಡೆಯ[ಹೂವು]ಬಾಡದೆಂದುಕಂಡೆ ನಾ ರಣದಲ್ಲಿ ಕಲಿಪಾರ್ಥನಿಗೊಲಿದುಬಂಡಿಯ ಬೋವ ನೀನಾದಂದು 2
ವೃಂದಾರಕೇಂದ್ರ ಶ್ರೀ ಹಯವದನ ಮುಕುಂದಮಂದರೋದ್ಧಾರ ಮತ್ತೊಂದರಿಯೆಇಂದಿರೆಯರಸ ಬಾ ಇಂದುವದನ ದೀನ-ಬಂಧುವೆ ಭಕ್ತರ ಸಿರಿಯೆ 3
***