Showing posts with label ಕಮಲ ಕೋಮಲೆ ಕಮಲಾಲಯೇ venkatanatha. Show all posts
Showing posts with label ಕಮಲ ಕೋಮಲೆ ಕಮಲಾಲಯೇ venkatanatha. Show all posts

Saturday 1 May 2021

ಕಮಲ ಕೋಮಲೆ ಕಮಲಾಲಯೇ ankita venkatanatha

 ಶ್ರೀ ಲಕ್ಷ್ಮೀ ಸ್ತುತಿ 

 ರಚನೆ : ಆಚಾರ್ಯ ನಾಗರಾಜು ಹಾವೇರಿ

ಮುದ್ರಿಕೆ : ವೆಂಕಟನಾಥ 


ಕಮಲ  ಕೋಮಲೆ ಕಮಲಾಲಯೇ ।

ಕಾಮಿತಾರ್ಥವ ಕೊಡುವ -

ಸುರಧೇನು ಅಮ್ಮಾ ।। ಪಲ್ಲವಿ ।।


ದುರ್ಗಾ ದುರ್ಗಮವಾದ -

ದುರಿತಗಳೆಲ್ಲ ಪರಿಹರಿಪ ।। ಅ. ಪ ।।


ಇಂದಿರಾ ಇಂದೀವರಾಕ್ಷೀ -

ಸಲಹಮ್ಮಾ ।

ಮಂದರೋದ್ಧಾರನ ವಕ್ಷಸ್ಥಲ 

ವಾಸಿ ಕಾಯೇ ।। ಚರಣ ।।


ಜಗನ್ಮಾತೆ ಜಗತ್ಪತಿಯ ರಾಣೀ ।

ಜಗದುದರ ಜಗದೇಕ-

ನಾಥನ ಪ್ರಿಯೇ ।। ಚರಣ ।।


ಜಗದ್ದಾತ ಜಗತ್ತ್ರಾಣನ ತಾಯೇ ।

ಜಗದ್ಭರ್ತ ಜಗದ್ಬುಕು

ವೆಂಕಟನಾಥನ ಹೃದಯವಲ್ಲಭೇ ।। ಚರಣ ।।

****


" ವಿವರಣೆ "

ಕಮಲ = ಸಾತ್ವಿಕ ಸಂಪತ್ತನ್ನು ಕೊಡುವವಳು 

" ಕಮಲಾಲಯೇ " 

ಸಜ್ಜನರಾದ ಶ್ರೀ ಹರಿಯ ಭಕ್ತರಿಗೆ ಆಶ್ರಯದಾತಳು 

ಸುರಧೇನು = ಕಾಮಧೇನು 

" ದುರ್ಗಾ "

ಸುಜೀವಿಗಳಿಗೆ ಸದಾ ಸರ್ವತ್ರ ಅಭಯ ಸ್ಥಾನವಾದ ಕೋಟೆಯಂತೆ ರಕ್ಷಕಳಾಗಿರುವವಳು 

ಇಂದಿರಾ = ಶ್ರೇಷ್ಠತ್ವವನ್ನು ಕೊಡುವವಳು 

ಇಂದೀವರಾಕ್ಷೀ = ತಾವರೆಯಂತೆ ಕಣ್ಣುಗಳುಳ್ಳವಳು 

ಜಗತ್ಪತಿ = ಶ್ರೀಮನ್ನಾರಾಯಣ 

" ಜಗದುದರ "

ಜಗತ್ತನ್ನೆಲ್ಲ ತನ್ನ ಹೊಟ್ಟೆಯಲ್ಲಿಟ್ಟು ಕೊಂಡವನು ( ಶ್ರೀ ಹರಿ )

ಜಗದೇಕನಾಥ = ವಿಶ್ವದೊಡೆಯ 

ಜಗದ್ಧಾತ = ಜಗತ್ತನ್ನು ಸೃಷ್ಟಿಸುವ ಶ್ರೀ ಚತುರ್ಮುಖ ಬ್ರಹ್ಮದೇವರು 

ಜಗತ್ತ್ರಾಣ = ಜಗತ್ತಿಗೆ ಬಲ ಕೊಡುವವನು 

ಜಗದ್ಭರ್ತ = ವಿಶ್ವಮಯನೂ, ವಿಶ್ವ ವ್ಯಾಪಕನೂ ಆದ ಶ್ರೀ ಹರಿ 

" ಜಗದ್ಭುಕು "

ಪ್ರಳಯ ಕಾಲದಲ್ಲಿ ಇಡೀ ಜಗತ್ತನ್ನೇ ನುಂಗುವ ಭಕ್ಷಕ ( ಶ್ರೀ ಹರಿ )

ಗುರು ವಿಜಯ ಪ್ರತಿಷ್ಠಾನ

****