Showing posts with label ಸುಮ್ಮನೆಲ್ಯದ ತಾ ನೋಡಿ ನಮ್ಮಯ್ಯನ ಕೃಪೆ gurumahipati. Show all posts
Showing posts with label ಸುಮ್ಮನೆಲ್ಯದ ತಾ ನೋಡಿ ನಮ್ಮಯ್ಯನ ಕೃಪೆ gurumahipati. Show all posts

Wednesday, 1 September 2021

ಸುಮ್ಮನೆಲ್ಯದ ತಾ ನೋಡಿ ನಮ್ಮಯ್ಯನ ಕೃಪೆ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ಸುಮ್ಮನೆಲ್ಯದ ತಾ ನೋಡಿ | ನಮ್ಮಯ್ಯನ ಕೃಪೆ | ಸುಮ್ಮನೆಲ್ಲ್ಯದ ತಾ ನೋಡಿ ವಮ್ಮನಾಗದೇ ಪ 


ಅಂದಿಗಿಂದಿಗೇ ಒಂದೆರಡಲ್ಲದೆ | ಸಂಧಿಸಿ ಬಂದಿಹ ಜನ್ಮಗಳಲ್ಲಿ | ಕುಂದದೆ ಪುಣ್ಯದ ವೃಂದದ ಪಡೆದಾ | ನಂದದ ಛಂದದಿ ನಿಂದವರಲ್ಲದೆ 1 

ಗಾಧವ ಸೂಸುವೆ ಸಾಧಕನಾಗಿ | ಸದರದಲಿ ಗುರು ಬೋಧದ ಲಿಂದಾ | ಸಾಧಿಸಿ ಸಾಧಿಸಿ ಬೇಧಿಸಿ ತನ್ನೊಳು | ವೇದಾಂತರಿ-ತಿಹ ಸಾಧುರಿಗಲ್ಲದೆ 2 

ಬಂದದ ನುಂಡು ಬಾರದ ಬಯಸದೆ | ನಿಂದಿಸಿ ಲೊಂದಿಸಿ ಕುಂದದೆ ಹಿಗ್ಗದೆ | ತಂದೆ ಮಹಿಪತಿ ನಂದನ ನುಡಿ ನಿಜ | ವೆಂದನುಭವಕೆ ತಂದವಗಲ್ಲದೇ 3

***