ಕಂಡೆನೋ ನಿನ್ನ ವೆಂಕಟನೇ
ಸ್ವಪ್ನೆಪುಂಡರೀಕಾಕ್ಷ ಸಂಪೂರ್ಣ ಸದ್ಗುಣನೇ ಪ
ಗಿರಿಯ ಮೇಲ್ಹತ್ತಿ ಬಂದಿಹೆನು
ಗಿರಿಯ ಮೇಲ್ಹತ್ತಿ ಬಂದಿಹೆನು
ನಿನ್ನಶರಣರೊಳಗೆ ಬಂದು ನುತಿಯ ಮಾಡಿಹೆನು
ಪರದೇಶ ಜನರ ನೋಡಿದೆನು
ಅವರ್ಹೊರಗೆ ಪೋಗಲು ನಾನ್ಹೊರಗೆ ಬಂದಿಹೆನು1
ಮತ್ತು ನಾ ಒಳಗೆ ಬಂದಿಹೆನು
ಮತ್ತು ನಾ ಒಳಗೆ ಬಂದಿಹೆನು
ತೆರದುತ್ತಮ ದ್ವಾರಗಳನ್ನೇ ನೋಡಿದೆನು
ಚಿತ್ರ ವಾಲಗರ ಕೇಳಿದೆನು
ಪೋಗಲುಕ್ತಿ ಪೇಳುತಲೆ ಸನ್ನಿಧಿಲೆ ಬಂದಿಹೆನು 2
ಸುಂದರಾಂಗಿಯರ ಮಧ್ಯದಲಿ
ಸುಂದರಾಂಗಿಯರ ಮಧ್ಯದಲಿ
ನಿನ್ನಚಂದ್ರಮಂಡಲ ಮುಖ ಕಮಲ ನೋಡುತಲಿ
ಇಂದಿರೇಶನೆ ನಯನದಲಿ
ಪೊಕ್ಕೆನಿಂದು ಸಂತೋಷ ನಿರ್ಭರ ಶರಧಿಯಲಿ 3
*****
*****