ಕಾಖಂಡಕಿ ಶ್ರೀ ಕೃಷ್ಣದಾಸರು
ಮಾಡಬಾರದೇ ಸಂಗಾ | ಸಂತರ | ಮಾಡಬಾರದೇ ಸಂಗ | ಕೂಡಿ ಶ್ರವಣವ ಮಾಡಲು ಮನದೊಳು | ಮಾಡಿಬಹುನು ಶ್ರೀರಂಗಾ ಪ
ದೇಶ ತಿರುಗುವದ್ಯಾಕ | ಕಾಸಿ ಆರಿದ ಹಾಲವು ಇದರಿಡೇ | ಆ ಶಿವಧ್ಯಾನವು ಬೇಕ 1
ನಾನಾ ಸಾಧನದಿಂದಾ | ಬಾಹು | ದೇನೆಲೋ ಮತಿಮಂದಾ | ಮನಿಯೊಳಗಿನ ಗಿಡ ಸಂಜೀವನಾಗಿರೆ | ಕಾನನ ತಿರುಗುವದೇ ಅಂಧಾ 2
ಲೋಹ ಪರುಷವ ಬಿಟ್ಟು | ಕಾಷ್ಟದ ಲಾಹುದೇ ಚಿನ್ನದ ಗಂಟು | ಮಹಿಪತಿ ನಂದನು ಸಾರಿದ ಸ್ವಹಿತಕ | ಮಹಾನುಭಾವದಾ ನಿಜಗುಟ್ಟು 3
***