Showing posts with label ಕುಟಿಲವನು ಕಳಿಯೋ ನಿಟಿಲ ನಯನಾ tandevaradagopala vittala. Show all posts
Showing posts with label ಕುಟಿಲವನು ಕಳಿಯೋ ನಿಟಿಲ ನಯನಾ tandevaradagopala vittala. Show all posts

Thursday, 5 August 2021

ಕುಟಿಲವನು ಕಳಿಯೋ ನಿಟಿಲ ನಯನಾ ankita tandevaradagopala vittala

 ..


kruti: tandevaradagopala vittala (ಪ್ರಹ್ಲಾದಗೌಡರು)


ಕುಟಿಲವನು ಕಳಿಯೋ ನಿಟಿಲ ನಯನಾ ಪ


ದುರ್ವಿಷಯ ಲಂಪಟದಿ ಮುಳಿಗಿ ಘನ ಸಂಕಟಕೆ ಒಳಗಾದೆನೊ ಪ್ರಭುವೇ ಅ.ಪ.


ಚಂಚಲವಗೊಂಬಂಥ ಮನದೊಳಗೆ ನೀ ನಿಂತು ನಿಶ್ಚಿಂತನಾ ಮಾಡು ಜೀಯಾ ಪಂಚಶಿರಪಿತನೆ ಪ್ರಪಂಚದೊಳು ವಂಚಿಸಿದರೊ ವಿರಿಂಚಿತನಯಾ ಪಂಚಭೇದ e್ಞÁನವನು ಪಂಚವಿಧ ತೋರೆಂದು ಬಿನ್ನೈಪೆ ಮಂಚಪದಯೋಗ್ಯಾ ವೈರಾಗ್ಯ 1

ಕಾಮಿನಿಯಳಾ ಇಟಕೊಂಡು ಅನ್ಯಳ ಕಾಮಿಸುವುದುಚಿತವೇ ರಾಯಾ ಕಾಮರೂಪದಿಂದೆನ್ನ ಕಡೆಗೆತ್ತಿ ಕಾಯದಿರೆ ಕಾಮಹರನೆಂಬ ಬಿರುದ್ಯಾತಕೊಕಾಮಪಿತನೇ ಕೇಳು ಕಾಲಕಾಲಕೆ ನಿನ್ನ ಕಾಲಿಗೆರಗುವಂತೆ ಮಾಡಿ 2

ಬಿಲ್ವಭಜಕನೆ ಕೇಳು ಮತ್ತೊಂದು ನಾನೊಲ್ಲೆಶಪಥ ಪೂರ್ವಕ ಪೇಳ್ವೆ ಮಿಥ್ಯಮತವೊಲ್ಲೆನೊಒಲ್ಲದ ಸುರನಿಗೆ ಚೆಲ್ವಿಯಾಗಿತ್ತು ಕಂಗೆಡಿಸಿ ಉಳಿಸಿದೆ ಬಿಲ್ಲುಗಾರನೆ ಮಗನ ಕಾಳಗದಿ ಕೆಡಹಿ ತಂದೆ-ವರದಗೋಪಾಲವಿಠಲನ ನೋಡಿ ತೋರಿದೇ 3

***