Showing posts with label ನಾರಾಯಣ ನಿನ್ನ ನಂಬಿದೆ ಲಕ್ಷ್ಮೀ ನಾರಾಯಣ rangavittala NARAYANA NINNA NAMBIDE LAKSHMEE NARAYANA. Show all posts
Showing posts with label ನಾರಾಯಣ ನಿನ್ನ ನಂಬಿದೆ ಲಕ್ಷ್ಮೀ ನಾರಾಯಣ rangavittala NARAYANA NINNA NAMBIDE LAKSHMEE NARAYANA. Show all posts

Thursday 4 November 2021

ನಾರಾಯಣ ನಿನ್ನ ನಂಬಿದೆ ಲಕ್ಷ್ಮೀ ನಾರಾಯಣ ankita rangavittala NARAYANA NINNA NAMBIDE LAKSHMEE NARAYANA





ನಾರಾಯಣ ನಿನ್ನ ನಂಬಿದೆ ಲಕ್ಷ್ಮೀ-
ನಾರಾಯಣ ನಿನ್ಹೊರತು ಪೊರೆವ ದೈವವೆಲ್ಲಿದೆ ll ಪ ll

ನಾ ಮೀರಿ ದುಷ್ಕರ್ಮವ ಮಾಡಿದೆ
ಅಪಾರಾಮಹಿಮ ದಯಾನಿಧೇ ll ಅ ಪ ll

ನಾನಾ ಯೋನಿಗಳಿಂದ ಬಂದೆನೋ
ಮಾನತಾಳಲಾರದೆ ಬಲು ನೊಂದೆನೋ 
ದೀನರಕ್ಷಕ ಎನ್ನ ಗತಿ ಮುಂದೇನೋ
ಮಾನದಿಂದಲಿ ಪಾಲಿಸುವಂಥ ದೊರೆ ನೀನೋ ll 1 ll

ದಾಸರ ಮನ ಉಲ್ಲಾಸನೆ 
ಶ್ರೀಶ ಆಶ್ರಿತ ಜನರ ಪೋಷನೆ
ಸಾಸಿರ ಅನಂತಮಹಿಮನೆ 
ಕ್ಲೇಶನಾಶ ಮಾಡಿಸೋ ಶ್ರೀನಿವಾಸನೆ ll 2 ll

ರಂಗನಗರ ಉತ್ತುಂಗನೆ 
ಗಂಗಾಜನಕ ಗರುಡತುರಂಗನೆ ಉ-
ತ್ತುಂಗ ಗುಣಗಳಂತರಂಗನೆ ಅ-
ನಂಗನ ಪೆತ್ತ ರಂಗವಿಠಲನೆ ll 3 ll
*******

ರಾಗ - ಶಂಕರಾಭರಣ  ತಾಳ - ಅಟ್ಟತಾಳ (raga, taala may differ in audio)
ರಾಗಶಂಕರಾಭರಣ ಅಟ್ಟತಾಳ

ನಾರಾಯಣ ನಿನ್ನ ನಂಬಿದೆ , ಲಕ್ಷ್ಮೀ-
ರಮಣ ನಿನ್ಹೊರತು ಪೊರೆವ ದೈವವೆಲ್ಲಿದೆ ||ಪ||
ನಾ ಮೀರಿ ದುಷ್ಕರ್ಮವ ಮಾಡಿದೆ
ಅಪಾರಮಹಿಮ ದಯಾನಿಧೇ ||ಅ.ಪ||

ನಾನಾ ಯೋನಿಗಳಿಂದ ಬಂದೆನೋ
ಮಾನ ತಾಳಲಾರದೆ ಬಲು ನೊಂದೆನೋ
ದೀನರಕ್ಷಕ ಎನ್ನ ಗತಿ ಮುಂದೇನೋ
ಮಾನದಿಂದಲಿ ರಕ್ಷಿಸುವಂಥ ದೊರೆ ನೀನೋ ||೧||

ದಾಸರ ಮನ ಉಲ್ಲಾಸನೆ
ಶ್ರೀಶ ಆಶ್ರಿತ ಜನರ ಪೋಷನೆ
ಸಾಸಿರ ಅನಂತ ಮಹಿಮನೆ
ಕ್ಲೇಶ ನಾಶಪಡಿಸೋ ಶ್ರೀನಿವಾಸನೆ ||೨||

ರಂಗನಗರ ಉತ್ತುಂಗನೆ
ಗಂಗಾಜನಕ ಗರುಡತುರಂಗನೆ ಉ-
ತ್ತುಂಗ ಗುಣಗಳಂತರಂಗನೆ ಅ-
ನಂಗನ ಪೆತ್ತ ರಂಗವಿಠಲನೆ ||೩||
*********