Audio by Mrs. Nandini Sripad
ಶ್ರೀ ವ್ಯಾಸತತ್ತ್ವಜ್ಞ ತೀರ್ಥರ ಕೃತಿ
( ಶ್ರೀ ಐಜಿ ಸ್ವಾಮಿಗಳು )
ರಾಗ ಸಾವೇರಿ ಮಿಶ್ರಛಾಪುತಾಳ
ಇದನೆ ಬೇಡುವೆನಯ್ಯ ಒದಗಿ ಪಾಲಿಸೊ ಜೀಯ ॥ ಪ ॥
ಬದಲು ನಾನೊಲ್ಲೆನೊ ವಿದಿತವೇದ್ಯ ಕೃಷ್ಣ ॥ ಅ ಪ ॥
ಕ್ಷಣ ಒಂದಗಲಿರಲಾರೆ ನಿನ್ನವರನು ಬಿಡೆ ।
ಕುಣಿಕುಣಿವೆನೊ ನಿನ್ನವರಂದದಿ ॥
ಗುಣತ್ರಯವಾರಣ ನಿನ್ನ ವಾರತೆ ಯಿದೆ ।
ಒಣಹರಟೆಗಳನ್ನು ಕೇಳಲೊಲ್ಲೆ ॥ 1 ॥
ನೀಚಜನರುಗಳ ಸಂಗವ ಕೊಡದಿರೊ ।
ವಾಚಾದಿಂದನ್ಯರಿಗಲ್ಪರಿಸಬ್ಯಾಡ ॥
ಸೂಚಿಸೊ ನಿನ್ನಯ ಗುಣಗಣಗಳ ಸೇವೆ ।
ಯಾಚಿಸುವೆನು ಇದನೇ ಇದನೇ ಮುರಾರೀ ॥ 2 ॥
ಶ್ರೀಶ ನಿನ್ನಯ ಕಥೆ ಕೇಳದೆ ಬಹುಕಾಲ।
ಕಾಸು ಬಾಳದು ಕೇಳೋ ಕರುಣಾಬ್ಧಿಯೆ ॥
ತಾಸು ಒಂದಾದರು ಅವನೇ ಸುಜೀವಿಯೋ ।
ವಾಸುದೇವವಿಠಲ ನಿನ್ನವರವನೂ ॥ 3 ॥
*********