Showing posts with label ಮಧ್ವಮತಕಿನ್ನು ಸರಿಯುಂಟೆ purandara vittala. Show all posts
Showing posts with label ಮಧ್ವಮತಕಿನ್ನು ಸರಿಯುಂಟೆ purandara vittala. Show all posts

Thursday, 5 December 2019

ಮಧ್ವಮತಕಿನ್ನು ಸರಿಯುಂಟೆ purandara vittala

ಮಧ್ವಮತಕಿನ್ನು ಸರಿಯುಂಟೆ – ಪ್ರ – |
ಸಿದ್ಧ ವೈಕುಂಠಕಿಂತಧಿಕ ಮತ್ತುಂಟೆ ? ||

.ವೃಕ್ಷದೊಳಗೆ ತುಳಸಿ ವೃಕ್ಷಕಧಿಕವಿಲ್ಲ |
ಪಕ್ಷಿಯೊಳಗೆ ಗರುಡ ಪಕ್ಷಿಗಿಂತ ಮಿಗಿಲಿಲ್ಲ ||
ದಕ್ಷ ಹನುಮಂತನಂತೆ ಲೋಕದೊಳು ಬಂಟರಿಲ್ಲ |
ಲಕ್ಷ್ಮಿಗೆ ಸರಿಯಾದ ಸ್ತ್ರೀಯರಿಲ್ಲ – ನೀ ಕೇಳೊ |
ಪಕ್ಷಿವಾಹನನೆನಿಪ ದೇವ ತಾ ಬಲ್ಲ ||

ಸಕಲ ಮಣಿಗಳಲಿ ಚಿಂತಾಮಣಿಗೆ ಸರಿಯಿಲ್ಲ |
ಮಿಕ್ಕ ರತ್ನಮೊಳಗೆ ಮಾಣಿಕತೆ ಮಿಗಿಲಿಲ್ಲ ||
ಭಕುತರೊಳಗೆಲ್ಲ ಚಂದ್ರಶೇಖರಗೆ ಸರಿಯಿಲ್ಲ |
ಮುಕುತಿ ಸುಖಗಳಿಗೆಣೆಯಿಲ್ಲ – ನೀ ಕೇಳೊ |
ಅಖಿಳಬ್ರಹ್ಮಾಂಡನಾಯಕ ತಾ ಬಲ್ಲ||

ಪ್ರಥಮಯುಗದಲಿ ಹನುಮ , 
ದ್ವಿತಿಯ ಯುಗದಲಿ ಭೀಮ |
ತೃತಿಯ ಯುಗದಲಿ ಮಧ್ವಾಚಾರ್ಯರೆಂದೆನಿಸಿ ||
ಸತುಶಾಸ್ತ್ರ ಕಿದಿರಿಲ್ಲಅಮೃತಕಿಂತಧಿಕವಿಲ್ಲ |
ರತಿಪತಿಗಿಂತ ಚೆಲುವರಿಲ್ಲ – ನೀ ಕೇಳೊ |
ಕಥೆಯನು ಪುರಂದರವಿಠಲ ತಾ ಬಲ್ಲ ||
***

Madhvamatakinnu sariyunte – pra – |siddha vaikunthakintadhika mattunte ||pa||

Vrukshadolage tulasi vrukshakadhikavilla |
Pakshiyolage garuda pakshiginta migililla ||
Daksha hanumantanante lokadolu bantarilla |
Lakshmige sariyada striyarilla – ni kelo |pakshivahananenipa deva ta balla ||1||

Sakala manigalali chintamanige sariyilla |
Mikka ratnamolage manikate migililla ||
Bakutarolagella camdrasekarage sariyilla |mukuti sukagaligeneyilla – ni kelo |
Akilabrahmandanayaka ta balla ||2||

Prathamayugadali hanuma , dvitiya yugadali bima |
Trutiya yugadali madhvacaryarendenisi ||
Satusastra kidirilla^^amrutakimtadhikavilla |ratipatiginta celuvarilla – ni kelo |
Katheyanu purandaravithala ta balla ||3||
***

***