Showing posts with label ತಾಪವ ಬಿಡಿಸು ದಯಾಪರ prasanna. Show all posts
Showing posts with label ತಾಪವ ಬಿಡಿಸು ದಯಾಪರ prasanna. Show all posts

Friday, 30 July 2021

ತಾಪವ ಬಿಡಿಸು ದಯಾಪರ ankita prasanna

 ರಾಗ -  :  ತಾಳ - 


ತಾಪವ ಬಿಡಿಸು ದಯಾಪರ ಶ್ರೀ

ಗೋಪಾಲಕೃಷ್ಣ ನೀ ಕಾಪಾಡು ಸಂಸಾರ ll ಪ ll


ಲೋಕನಾಯಕ ನಿನ್ನ ಕರುಣವಂದಿದ್ದರೆ

ಸಾಕೆಂದೆ ಜ್ಞಾನಾನಂದಕರ

ಪಾಕಶಾಸನ ಸುತಗೊಲಿದಾತನ ಭಂಡಿ

ನೂಕಿ ನಡೆಸಿದ ಕೃಪಾಕರ ಮೂರುತಿ ll 1 ll


ನಡೆವುದು ನುಡಿವುದು ಕೊಡುವುದು ಕೊಂಬುದು

ಮಡದಿ ಮಂದಿರ ಮಮತಾಸ್ಪದದ

ಒಡವೆ ವಸ್ತುವು ಮೊದಲಾದುದೆಲ್ಲವನು ಶ್ರೀ-

ಮುಡಿಯ ಸಂವರಿಸುವ ಕರದಿ ಸಂಗ್ರಹಿಸುತ ll 2 ll


ನಿನ್ನಡಿಗಳ ನಂಬಿ ನಿಂದಿಹೆನಿಲ್ಲಿ ಪ್ರ-

ಸನ್ನ ಮುಖಾಂಬುಜ ಪಾಲಿಸೆಂದು

ಅನ್ಯರಿಗೆಂದೆಂದು ದೈನ್ಯ ತೋರಿಸಲಾರೆ

ಪನ್ನಗಾಚಲವಾಸ ಪರಮ ದಯಾಳೊ ll 3 ll

***