..
ಹರಿವಾಸರದುಪವಾಸದ ಫಲವು ಕಂಡವರಿಗೆ ದೊರಕುವುದೆ ಪ.
ಹಿರಿದು ಜನ್ಮಗಳಲಿ ಹರಿಯನಾರಾಧಿಪ
ಪರಮ ಭಾಗವತರ ಭಕ್ತರಿಗಲ್ಲದೆ ಅ.ಪ.
ಸ್ನಾನಸಂಧ್ಯಾನವು ಮೊದಲಾದ ಕರ್ಮ
ನ್ಯೂನದ ಪಾಪಂಗಳು
ದೀನತ್ವದಿಂದ ತುಚ್ಛರಕೈಯ ಹಿಡಿದ ದು
ರ್ದಾನದ ಪಾಪಂಗಳು
ಭಾನುಬಿಂಬವ ಕಂಡ ಹಿಮದಂತೆ
ಚಿದಾನಂದವಾದ ವ್ರತಕೆ ಸರಿ ಬಾರದು 1
ಪರಸತಿಯರ ನೋಡಿ ಮನವಿಟ್ಟ ಪಾಪವು
ಪರದೂಷಣೆಯ ಪಾಪವು
ಪರಮಾತ್ಮನ ಹೊಗಳುವ ನಾಲಗೆಯಲ್ಲಿ
ನರರ ಹೊಗಳುವ ಪಾಪವು
ಪರರ ಹಿಂಸೆಯ ಮಾಡಿ ಪರ ವಸ್ತುಗಳನಪ-
ಹರಿಸುವ ಪಾಪಂಗಳು
ಹರಿಯ ಮರಿಯ ಕಂಡು ಕರಿ ಓಡುವಂತೆ
ದುರಿತ ಕೋಟಿಗಳನು ಪರಿಹರಿಸುವ ಶ್ರೀ 2
ಆಡುವ ಅನೃತವಾಕ್ಯಗಳಿಂದ ಸಂಭವವಾಗುವ ಪಾಪಂಗಳು
ನೋಡಿಕೊಳ್ಳದೆ ದುರಾನ್ನವನುಂಬ ದುರ್ದಾನದ ಪಾಪಂಗಳು
ಮಾಡಬಾರದ ದಿನದಲಿ ಸ್ತ್ರೀಗೋಷ್ಠಿಯ ಮಾಡಿದ ಪಾಪಂಗಳು
ಕಾಡುಕಿಚ್ಚನೆ ಕಂಡ ಖಗಮೃಗತತಿಯಂತೆ
ಓಡುವುದಘಸಂಘ ಉತ್ತಮವಾಗಿಹ3
ಮತ್ತೆ ಈ ಬಹಳ ಪಾಪಗಳಿಗೆಲ್ಲ ತಾ ಪಕ್ಷ ಪ್ರಾಯಶ್ಚಿತ್ತವು
ಉತ್ತಮವಾದ ವ್ರತಗಳಿಗೆಲ್ಲ ತಾ ಉತ್ತಮವೆನಿಸುವುದು
ಚಿತ್ತಶುದ್ಧಿಯನಿತ್ತು ಜ್ಞಾನವೈರಾಗ್ಯದಿ ಭಕ್ತಿ ಮಾರ್ಗವನೀವುದು
ಮುಕ್ತಿಗೆ ಸೋಪಾನವಾಗಿ ಭವಾಭ್ಧಿಯ ದಾಟಿಸಿ
ಹರಿಯ ಸನ್ನಿಧಿಗೆ ದಾರಿಯನೀವ 4
ತೋರುವ ದಶಮಿ ದ್ವಾದಶಿಗಳು ಸಂಪುಟಾಕಾರದಿ ಹರಿದಿನವು
ಮೂರುದಿನದ ವ್ರತ ನಾಲ್ಕು ಹೊತ್ತಿನ ಆಹಾರಗಳು ವರ್ಜಿತವು
ಊರುದಾರಿಗಳ ನಡೆಯದೆ ತಾಂಬೂಲ ಚರ್ವಣಂಗಳೊರ್ಜಿತವು
ನಾರಾಯಣನ ದಾಸರ ಸಂಗದೊಡನೆ
ಜಾಗರ ಮಾಡಿ ವ್ರತವಾಚರಿಸುವ 5
ಅತಿಶಯವಾದ ಶ್ರೀಹರಿದಿನದಿ ಪಿತೃತರ್ಪಣಗಳು ವಜ್ರ್ಯವು
ಪ್ರತಿವರುಷದಲಿ ಆಚರಿಸುವ ತಾಯಿತಂದೆ ತಿಥಿಗಳೆಲ್ಲ ವಜ್ರ್ಯವು
ಸತತವು ಮಾಡುವ ಯಜ್ಞಪುರುಷಗೆ ಆಹುತಿಗಳೆಲ್ಲ ವಜ್ರ್ಯವು
ಇತರ ಭೋಗ ಕೃತ್ಯಗಳನೆಲ್ಲ ವರ್ಜಿತಮಾಡಿ ಈ ವ್ರತವನಾಚರಿಸುವ 6
ಹಲವು ವ್ರತಗಳಾಚರಿಸಿ ದಾನಂಗಳ ಹಲವು ಮಾಡಿದರೇನು
ಹಲವು ಪುಣ್ಯತೀರ್ಥನದಿಯಲ್ಲಿ ಸ್ನಾನವÀ ಮುದದಿ ಮಾಡಿದರೇನು
ಹಲವು ಪುರಾಣಂಗಳ ಹಲವು ಶಾಸ್ತ್ರಂಗಳ ಹಲವು ಕೇಳಿದರೇನು
ಹಲವು ದೈವಂಗಳಿಗೊಡೆಯನಾದ
ಶ್ರೀಹಯವದನನ್ನ ದಿನಕೆ ಸರಿಬಾರದು 7
***