Showing posts with label ಎನ್ನಪರಾಧವೇನು ನಿನ್ನ ಸೂತ್ರಾಡಿಸಿಧಾಂಗ mahipati. Show all posts
Showing posts with label ಎನ್ನಪರಾಧವೇನು ನಿನ್ನ ಸೂತ್ರಾಡಿಸಿಧಾಂಗ mahipati. Show all posts

Thursday 12 December 2019

ಎನ್ನಪರಾಧವೇನು ನಿನ್ನ ಸೂತ್ರಾಡಿಸಿಧಾಂಗ ankita mahipati

ಭೈರವಿ ರಾಗ ದಾದರಾ ತಾಳ

ಎನ್ನಪರಾಧವೇನು ?
ನಿನ್ನ ಸೂತ್ರಾಡಿಸಿಧಾಂಗ ಆಡುವೆ ಹರಿ ||ಪ||

ಆಡಿಸಿದರಾಡುವೆ ನೋಡಿಸಿದರೆ ನೋಡುವೆ
ಮಾಡಿಸಿದರೆ ಮಾಡುವೆ ಪ್ರೇರಿಸಿದ್ಹಾಂಗೆ ||೧||

ನಡಿಸಿದರೆ ನಡೆವೆ ಕೂಡಿಸಿದರೆ ಕೂಡುವೆ
ನುಡಿಸಿದರೆ ನಾ ನುಡಿವೆ ಚೇತಿಸಿದಂತೆ ||೨||

ಉಡಿಸಿದರೆ ಉಡುವೆ ತೊಡಿಸಿದರೆ ತೊಡುವೆ
ಇಡಿಸಿದರೆ ನಾ ಇಡುವೆ ಸರ್ವ ಭೂಷಣಾ ||೩||

ಹೇಳಿಸಿದರೆ ಹೇಳುವೆ ಕೇಳಿಸಿದರೆ ಕೇಳುವೆ
ಆಳಿಸಿದರೆ ಆಳುವೆ ಅನುವಾದ್ಹಾಂಗ ನೀ ||೪||

ಕಲಿಸಿದರೆ ಕಲಿವೆ ಬಲಿಸಿದರೆ ಬಲಿವೆ
ಮಲಗಿಸಿದರೆ ಮಲಗುವೆ ಸುಖಗೈಸಿದ್ಹಾಂಗೆ ||೫||

ನೇಮಿಸಿದರೆ ನೀ ಒಂದು ನಾ ಮಾಡುವುದು ಒಂದು
ನಿಮಿತ್ಯ ಮಾಡಿ ದೋರುದು ಸೋಜಿಗಿದೊಂದು ||೬||

ಎನ್ನ ಬಾಹ್ಯಾಂತ್ರ ಪೂರ್ಣ ಚೆನ್ನಾಗಿರೆ ನೀ ಕರುಣಾ
ಚೆನ್ನ ಮಹಿಪತಿಗಭಿಮಾನಾ ನಿನ್ನದೇ ಅನುದಿನಾ ||೭||
*********