Showing posts with label ದೇವಿ ಸರಸ್ವತಿ ನಿತ್ಯ ಕಾವುದೆಮ್ಮನು ankita narahari P. Show all posts
Showing posts with label ದೇವಿ ಸರಸ್ವತಿ ನಿತ್ಯ ಕಾವುದೆಮ್ಮನು ankita narahari P. Show all posts

Thursday, 5 August 2021

ದೇವಿ ಸರಸ್ವತಿ ನಿತ್ಯ ಕಾವುದೆಮ್ಮನು ankita narahari P

 ..

kruti by pradyumna teertha ಪ್ರದ್ಯುಮ್ನತೀರ್ಥರು


ದೇವಿ ಸರಸ್ವತಿ ನಿತ್ಯ ಕಾವುದೆಮ್ಮನು ಪ


ದೇವಿ ಸರಸ್ವತಿ ನಿತ್ಯ ಸೇವಿಪ ಮನುಜರಘ

ಪಾವಿತರನ್ನ ಮಾಡುವಿ ನೋವ ಕೊಡದಲೆ ಕಾಯೇ ಅ.ಪ

ಪದ್ಮನಾಭನ ನಾಭಿ ಪದ್ಮಜನ ಸಹ ಹೃ

ತ್ಪದ್ಮದೊಳಗೆ ನೆಲಸಿ ಛದ್ಮವ ಕಳೆಯೆ ನಿರುತ 1

ಮಾರಮಣನ ದಿವ್ಯ ಚರಣ ಸರೋಜವ

ತೋರಿ ಕರುಣವ ಮಾಡೆ ವಾರಿಜಾಸನನ ರಾಣಿ2

ಲಕುಮೀ ನಾರಾಯಣನ ಸುಕುಮಾರ ಚತುರ್ಮುಖ

ನ್ವಾಕಿಗಾಗಿ ಬ್ರಾಹ್ಮೀ ಎನಿಸಿ ಸಾಕುವಿ ಲೋಕವ ಕಾಯೆ 3

ಮಾಯಪತಿ ವಾಸುದೇವ ಕಾಯಜ ಕಾಲ ಪುರುಷರ್ಗೆ

ಗಾಯಿತ್ರಿ ಸಾವಿತ್ರಿಯಾಗಿ ತೋಯಜಾಸನ ವಿಹಾರಿ 4


ಶಂಕರ ಸನ್ನುತ ಜಯಾ ಸಂಕರುಷಣನ್ನ ಪಾದ

ಕಿಂಕರನ್ನ ಮಾಡಿ ಎನ್ನ ಸಂಕಟ ಪರಿಹಾರ ಮಾಡೆ 5


ಕೃತಿಪತಿ ಪ್ರದ್ಯುಮ್ನನ ಸುತೆ ನುತಿಪೆನು ಸದಾ

ಖ್ಯಾತಿಯನ್ನಿತ್ತನ್ಯಥಾ ಖ್ಯಾತಿಯ ಕಳೆಯೆ ಮಾತೆ 6

ಶಾಂತಿಪತಿ ಅನಿರುದ್ಧನಾಂತುದಿಸಿ ವಿರಂಚಿ

ಕಾಂತೆ ದುರಿತ ತರಿದು ಶಾಂತ ಮನಸನು ಕೊಡೆ7


ವಾಣಿ ವೀಣಾಪಾಣಿಯೇ ಕಾಣಿಸನುದಿನವೆನಗೆ

ಫಣಿ ಮೃಡ ಇಂದ್ರಮುಖ ಗಣರಾರಾಧಿತಳೇ ತಾಯೆ 8


ಹೀನಗುಣವೆಣಿಸದೆ ಜ್ಞಾನ ಭಕ್ತಿ ವೈರಾಗ್ಯವ

ಸಾನುರಾಗದಲಿ ಇತ್ತು ಶ್ರೀ ನರಹರಿಯ ತೋರೆ 9

***