yes
jyeshta masa song
ಮಣ್ಣೆತ್ತಿನ ಅಮಾವಾಸ್ಯೆ
ಜ್ಯೇಷ್ಠ ಬಹಳ ಅಮಾವಾಸ್ಯೆಯ ದಿನದಿ ಶ್ರೇಷ್ಠ ವೃಷಭಗಳ ಪೂಜಿಸಿ
ಯಥೇಷ್ಠವಾದ ಧಾನ್ಯಾಭಿವೃಧ್ಧಿಗೆ ನಿಷ್ಠೆಯಿಂದ ಕಾರ್ಯ ಮಾಡುತ್ತಲಿ||ಪಲ್ಲ||
ಮಣ್ಣಿನಿಂದ ವೃಷಭಗಳನೆ ತಯಾರಿಸಿ ಭಕ್ತಿಂದ ಪೂಜೆ ಮಾಡುತ್ತಲಿ
ಅರಿಷಿಣ ಕುಂಕುಮ ಗೆಜ್ಜೆ ವಸ್ತ್ರಗಳಿಂದ ಕರ್ಕಿ ಪುಷ್ಪದಿಂದ ಪೂಜಿಸಿ
ನೆನಸಿದ ಕಡಲೆಯ ಹಾರವನ್ಹಾಕಿ ಕಡುವು ಪಾಯಸ ನಿವೇದಿಸಿ
,ಹೆಚ್ಚಾಗಿ ಬಿತ್ತಿದ ಫಸಲು ಬರಲೆಂದು ಶ್ರಧ್ಧೆಯಿಂದಲಿ ಬೇಡುತ್ತಲಿ||೧||
ಪಂಚ ಭೂತಗಳಲ್ಲಿ ಒಂದಾದ ಭೂಮಿಯಲ್ಲಿ ಬೀಜ ಬಿತ್ತಲು
ಧಾನ್ಯರೂಪದಿಂದ ಹೆಚ್ಚಾಗಿ ಪಡೆಯಲು ವೃಷಭಗಳ ಪೂಜಿಸಲ
ವರ್ಷಕ್ಕೆ ಐದು ಬಾರಿ ಭೂಮಾತೆ ಪೂಜಿಸುವ ಪಧ್ಧತಿಯು
ಹಿರಿಯರಿಂದ ನಡದು ಬಂದ ದಾರಿಯಾಗಿ ತೋರುವುದು||೨||
ಮಣ್ಣೆತ್ತಿನ ಪೂಜೆ ,ನಾಗಪೂಜೆ ಗೋಕುಲದ ಪೂಜೆಯು
ಗಣೇ ಶನ ಪೂಜೆ ಗೌರಿಪೂಜೆಯೆಂದು ಐದು ವಿಧ ಇರುವದು
ಭಕ್ತಿಯಿಂದ ಶ್ರಧ್ಧೆಯಿಂದ ನಿಷ್ಠೆಯಿಂದ ಪೂಜಿಸುತ್ತ
ಮಧ್ವೇಶಕೃಷ್ಣನ ವರಗಳ ಬೇಡುತ್ತ ಭುವಿಯಲ್ಲಿ ಚನ್ನಾಗಿ ಬಾಳುತ್ತ||೩||
**********