ಕಾಖಂಡಕಿ ಶ್ರೀ ಕೃಷ್ಣದಾಸರು
ನಮೋ ನಮೋ ಮುಖ್ಯ ಪ್ರಾಣ ನಾಥನೇ ನಮೋ ಜಗದೊಳು ಪ್ರಖ್ಯಾತನೇ ಪ
ಧರಣಿ ಸುತೆಯ ಮುಖ ಚಂದ್ರಚಕೋರನಾ ಸಿರಿ ಚರಣಾಂಬುಜ ಭೃಂಗಾ ಸುರವರರಿಯ ತಂದೆಯ ಮಾವನ ಸಂ ಹರಿಸದೆ ವಾನರ ತುಂಗಾ1
ದುರ್ಯೋಧನಾದಿ ನೂರೊಂದು ಮಂದಿಯ ತನು ಪರ್ವತ ವಜ್ರದಂಡಾ ಕರಿ ಏರಿ ಬಹ ಭಗದತ್ತನ ಗದೆಯಿಂದ ಹರಿಸದೆ ಭೀಮ ಪ್ರಚಂಡಾ2
ಧರಿಯೊಳುತಾನವ ಗುಣ ಕರಿಯಾವಳ ನರಸಿಂಹನು ಮಧ್ವರೇಯ ಪರಮರೂಪವ ಮೂರಾಗಿ ದೊರಿದೆ ಗುರು ಮಹಿಪತಿ ಪ್ರಭು ಪ್ರೀಯಾ || 3
****