by gopalaryaru
ಸೋಹಮೆಂದು ಸುಖಿಸು ವಿಗತ ಮೋಹದಿಂದ ಸಂತತಂದೇಹ ದೇಹದೊಳಗೆ ತೋರ್ಪನೀ ಹಿತಾತ್ಮನೀತ ಪರಮ ಪ
ಘನದ ರತುನಮಂಟಪವನು ಶುನಕವೇರಿ ತನ್ನ ನೆಳಲಕನಲಿ ನೋಡಿ ಗಳಹಿ ತಾನಿದೆಂಬುದರಿಯದೆಮನದೊಳನ್ನವೆಂದು ಭ್ರಮಿಸಿ ಮತ್ತೆ ಕಡಿಯಲದರೊಳೊಡದು*ನೆನೆವ ತನ್ನ ರಕುತವನ್ನು ಸವಿವ ರೀತಿಯಲಿವಿನುತ ಜೀವ ತನ್ನ ಛಾಯೆಯನು ಸಮಸ್ತರೊಳಗೆ ನೋಡಿನೆನೆದಿದನ್ಯವೆನುತ ಭ್ರಾಂತನಾಗಿ ಮಾಯೆುಂದನುಭವಿಸುವೆನಿದನಿದೊಲ್ಲೆನೆನುತ ಭೇದ ಬುದ್ಧಿುಂದಮನುಮಥಾಗ್ನಿುಂದ ಬೆಂದು ಮನದಲಿದ್ದ ಕಾರಣಂ 1
ನರರು ಗಜವ ಪಿಡಿಯೆ ಕಪ್ಪ ಕೊರವುತದರ ನಡುವೆ ತಿಟ್ಟನಿರಿಸಿ ಕಣ್ಣಿಯಲ್ಲಿ ಕಟ್ಟಿಯದರ ಸುತ್ತಲೂನೆರಹಿ ಕಾಷ್ಠ ಮೃತ್ತುಗಳನು ನಿಜದಪ್ಪಿರಮಾಡೆ ಭ್ರಮಿಸಿಕರಿಣಿಗಾಗಿ ಬಂದು ಗಜವು ಮರೆದು ಬಿದ್ದ ರೀತಿುಂದುರೆ ವಿರಿಂಚಿ ರಕ್ತ ಮಾಂಸ ನರ ಮಲಂಗಳಿಂದ ರಚಿಸಿನರಕ ಕೂಪ ಸಾಮ್ಯವಾದ ನರಶರೀರಮಂಮರೆಸಲದರ ಮೇಲೆ ಚರ್ಮವೆನಿಪ ಮಾಯೆುಂದ ನರರುಮರೆತು ತಾವಿದೆನ್ನುತದರಲಿದ್ದ ಕಾರಣಂ 2
ಮರೆದು ತನ್ನ ತಾಣವನ್ನು ಮೆರೆದುಲಂಘಿಸುತಲಿ ಭೇಕವಿರಲು ಹೊಂಚಿ ಪಿಡಿದು ಪಾವು ಪಿರಿದು ದೇಹಮಂನೆರೆದು ನುಂಗಲಾರದಿರುತಲಿರಲು ಭೇಕ ತನ್ನ ಹಸಿವಿಗಿರದೆ ಬಾಯ ತೆಗೆದು ನೊಣನನರಸಿ ಪಿಡಿವ ರೀತಿುಂನರರು ತಮ್ಮ ಕಾಲಸರ್ಪ ಉರುಬಲದನು ಮರೆತು ಭೋಗಪರತೆುಂದ ಕಾಮರೋಷ ವಿರಸರಾಗುತಿರಲು ನೀನರಿದನಿತ್ಯವೆಲ್ಲವೆಂದು ಮೆರೆದು ಗೋಪಾಲಾರ್ಯ ಪದವನೆರೆದು* ಭಕತಿುಂದ ನೋಡಿ ಪಾಡಿ ಹರುಷದಿಂದ ನೀ 3
***