ಕಾಖಂಡಕಿ ಶ್ರೀ ಮಹಿಪತಿರಾಯರು
ಇಂದಿನ ದಿನ ಸುದಿನವಿದು ನೋಡಿ ತಂದೆ ಸದ್ಗುರು ಕೀರ್ತಿಯ ಕೊಂಡಾಡಿ P
ಸಾರ್ಥಕವಾಯಿತು ಜನ್ಮಕ ಬಂದು ಕರ್ತು ಸದ್ಗುರು ಕರುಣವ ಪಡೆದಿಂದು ಮಾಯಾ ನೋಹದಸಂದು ಆರ್ಥಿ ಆಯಿತು ಮನದೊಳು ನಮಗಿಂದು 1
ಕೇಳಿದೆವು ಹರಿನಾಮದ ಘೋಷ ಹೊಳೆಯಿತು ಮನದೊಳು ಅತಿ ಉಲ್ಹಾಸ ಕಳೆದೆವು ಕತ್ತಲೆ ಜ್ಞಾನದ ದೋಷ ಬೆಳಗಾಯಿತು ಗುರುಜ್ಞಾನ ಪ್ರಕಾಶ 2
ಸೇವಿಸಿ ಸದ್ಗುರು ನಾಮಸುರಸ ಆಯಿತು ಮನ ಚಿದ್ಭನ ಸಮರಸ ಹೋಯಿತು ಭವಭಯದ ತಾ ಕ್ಲೇಶ ಮಹಿಪತಿಗಾಯಿತು ಅತಿ ಸಂತೋಷ 3
***