Showing posts with label ಕರುಣಿಸಯ್ಯ ಚಂದ್ರಶೇಖರ ನೀನೆನ್ನೊಳೊಲಿದು gadugina veeranarayana. Show all posts
Showing posts with label ಕರುಣಿಸಯ್ಯ ಚಂದ್ರಶೇಖರ ನೀನೆನ್ನೊಳೊಲಿದು gadugina veeranarayana. Show all posts

Wednesday, 1 September 2021

ಕರುಣಿಸಯ್ಯ ಚಂದ್ರಶೇಖರ ನೀನೆನ್ನೊಳೊಲಿದು ankita gadugina veeranarayana

 ..

kruti by ವೀರನಾರಾಯಣ Veeranarayana 

ಶಿವ


ಕರುಣಿಸಯ್ಯ ಚಂದ್ರಶೇಖರ ನೀನೆನ್ನೊಳೊಲಿದು ಪ


ಕರುಣಿಸಯ್ಯ ಭವದ ತಾಪ ಹರಣ ಮಾಡು ನಿನ್ನ ದಿವ್ಯಚರಣಗಳಿಗೆ ನಮಿಪೆನುರಗಾಭರಣ ಶರಣು ಶರಣು ಶರಣು ಅ.ಪ.


ಕಾಳಭೈರವ ಶಂಭು ಶಂಕರ ಗಿರಿಜೆಯಾಣ್ಮಕೇಳು ಕೇಳು ನಿನ್ನ ಕಿಂಕರಹೂಳಿ ಷಡ್ರಿಪುಗಳನು ಮನದಲಿಊಳಿ ನಿಜಜ್ಞಾನವನು ಸಜ್ಜನರೋಳಿಯಲಿ ನಿಲಿಸುತ್ತ ನಿತ್ಯದಿಬಾಳಿ ತಾಳಿ ಎನುವಂತೆ 1


ನಂಟನಯ್ಯ ಭಕ್ತ ಜನಕೆ ಇನ್ನು ಮಿತಿಯುಂಟೆ ನಿನ್ನಯ ಕರುಣಲಹರಿಂಗೆಎಂಟು ದಿಕ್ಕನು ಸುಡುವ ವಿಷವನುಕಂಠದಲಿ ಧರಿಸಿ ಜಗತ್ತಿನಕಂಟಕವನು ಪರಿಹರಿಸಿದಂಥಬಂಟ ನೀನೈ ಮಹಾದೇವಾ 2


ಮೂರು ಊರುಗಳನು ಸಂಹಾರಾಮಾಡಿ ಉಳಿಸಿದಿಘೋರ ಸಂಕಟದಿಂದ ಜಗಪೂರಸೂರಿ ಬೊಮ್ಮನ ಮತ್ತೆ ಗದುಗಿನವೀರನಾರಾಯಣನ ಕೂಡಿನಾರಿ ಸತಿಯನಸೂಯಳನ್ನುದ್ಧಾರ ಮಾಡಿದ ರೀತಿಯಲ್ಲಿ 3

***