Showing posts with label ಶ್ರೀಗುರುಸಾಹ್ಯ ಕಂಡೆ ಕಂಡೆವಯ್ಯ ಪಿಂಡ ಬ್ರಹ್ಮಾಂಡದೊಳು mahipati. Show all posts
Showing posts with label ಶ್ರೀಗುರುಸಾಹ್ಯ ಕಂಡೆ ಕಂಡೆವಯ್ಯ ಪಿಂಡ ಬ್ರಹ್ಮಾಂಡದೊಳು mahipati. Show all posts

Wednesday, 1 September 2021

ಶ್ರೀಗುರುಸಾಹ್ಯ ಕಂಡೆ ಕಂಡೆವಯ್ಯ ಪಿಂಡ ಬ್ರಹ್ಮಾಂಡದೊಳು ankita mahipati

 ಕಾಖಂಡಕಿ ಶ್ರೀ ಮಹಿಪತಿರಾಯರು

ಶ್ರೀಗುರುಸಾಹ್ಯ ಕಂಡೆ ಕಂಡೆವಯ್ಯ ಪಿಂಡ ಬ್ರಹ್ಮಾಂಡದೊಳು ಹಿಂಡದೈವದೊಡಿಯ ಪ್ರಚಂಡನ ಕಂಡೆ ಪ  

ದೀನಾನಾಥನ ಕಂಡೆ ದಿನೋದ್ಧಾರನ ಕಂಡೆ ಅನಾಥಜನರ ಪ್ರತಿಪಾಲನ ಕಂಡೆ 1 

 ಕಂಡೆ ವಾರಿಜಾಕ್ಷನ ಕಂಡೆ ವರಮುನಿಜನರ ಪ್ರತ್ಯಕ್ಷನ ಕಂಡೆ 2 

ಭಕ್ತಪ್ರಿಯರ ಕಂಡೆ ಮುಕ್ತಿ ಈವನ ಕಂಡೆ ಪತಿತಪಾವನ ಗುರುಸಂಜೀವನ ಕಂಡೆ 3 

ದೇವದೇವನ ಕಂಡೆ ಕಾವ ಕರುಣನ ಕಂಡೆ ಮಹಿಪತಿ ತಾರಕಗುರುಭವನಾಶನ ಕಂಡೆ 4

***