..
ಪಾಲಯಮಾಂ ಸುಶೀಲೇಂದ್ರ ಸನ್ಮಹಿಮ
ಶಾಲಿ ಶ್ರೀವರದ ಕೂಲ ನಿವಾಸ ಪ
ಅನಿಲಮತಾಂಬುಧಿ | ಅನಿಮಿಷಧೀರ
ಅನುಪಮ ಚರಿತ ಸದ್ಗುಣ ಗಂಭೀರ
ಮುನಿ ಸುವೃತೀಂದ್ರ ಸನ್ಮಾನಸ ನಿಲಯ 1
ಕರುಣ ಭರಿತ ಶರಣು ಸುಪ್ರೀತ
ಪರಮ ಪುರುಷ ಸುವೃತೀಂದ್ರ ಕುಮಾರ
ಪರಮತ ಪರ್ವತ ಕುಲಿಶ ಸುಧೀರ 2
ಕೋವಿದರೊಡೆಯ ಪಾವನಕಾಯ
ಭೂವಿಭುದಾವಳಿ ಸೇವಿತ ಸದಯ
ಶ್ರೀವರ ಶಾಮಸುಂದರಗತಿ ಪ್ರೀಯ 3
***