Showing posts with label ಪೊರೆಯದಿರುವರೇ ಶ್ರೀ ರಮಣಾ krishnavittala. Show all posts
Showing posts with label ಪೊರೆಯದಿರುವರೇ ಶ್ರೀ ರಮಣಾ krishnavittala. Show all posts

Monday 2 August 2021

ಪೊರೆಯದಿರುವರೇ ಶ್ರೀ ರಮಣಾ ankita krishnavittala

ಪೊರೆಯದಿರುವರೇ ಶ್ರೀ ರಮಣಾ ಪ


ದುರಿತಗಜಕೆ ನೀ ಪಂಚಾನನಾ ಅ.ಪ.


ಸಿರಿಯ ಮದದಿ ನಾನರಿಯದೆ ಪೋದರೆ

ಗರುಡಗಮನ ನೀ ಮರೆತುಬಿಡುವರೇ

ಕರುಣಶರಧಿ ಸರಿ ಬಿರುದು ಪೊಳ್ಳಾಗದೇ

ಚರಣಪಿಡಿವೆ ಪೊರೆ ಮರುತನೊಡೆಯ ಹರಿ1


ಪಾತಕಿ ಎಂಬುವ ನೀತಿಯನುಡಿದೊಡೆ

ಪೂತರಮಾಡುವ ಖ್ಯಾತಿಯ ಬಿಡುವೆಯ

ನಾಥನೆ ನಂಬಿದೆ ಕಾತರ ಪಡುತಿಹೆ

ಪ್ರೀತಿಲಿ ಕಾಣಿಸು ಆರ್ತಿವಿದೂರ 2


ನಡಿಯುವ ಚರಣವು ಎಡುವುದು ಸಹಜವೆ

ಮೃಡ ಭೃಗು ಭೀಷ್ಮರು ದುಡುಕಲಿಲ್ಲೆ ದೊರೆ

ಮಿಡಕಿ ನಡುಗುತಿಹೆ ನಡೆವುದು ಜಗಬಿಡೆ

ಕಡಲಶಯನ ಪಿಡಿ ಬಿಡದೆ ಕೊಡುತ ರತಿ 3


ಸಿರಿವಿಧಿ ಶಿವನುತ ಸ್ವರತ ಸ್ವತಂತ್ರನೆ

ಶರಣರ ಪೊರೆಯುವ ವರಗುಣ ಭೂಷಣ

ಅರಿಯೆನುಪಾಯವ ಶರಣುಶರಣೈಯ

ಪರಮಪುರುಷ ಭಗಸರಸದಿ ನಲಿನಲಿ 4


ಸಾಕುವ ಬಿಂಬನೆ ನೂಕಿದೆ ಯಾತಕೆ

ಹಾಕುತ ಮಂಕನು ಏಕಾಯತನ

ನಾಕರೊಡೆಯ ಭವನೂಕುತ ಬೇಗನೆ

ಸ್ವೀಕರಿಸೆನ್ನನು ಶ್ರೀ ಕೃಷ್ಣವಿಠಲಾ 5

***