Showing posts with label ಶ್ರೀಕರಾರ್ಚಿತ ಜಗದೇಕಕಾರಣ gurujagannatha vittala. Show all posts
Showing posts with label ಶ್ರೀಕರಾರ್ಚಿತ ಜಗದೇಕಕಾರಣ gurujagannatha vittala. Show all posts

Friday, 27 December 2019

ಶ್ರೀಕರಾರ್ಚಿತ ಜಗದೇಕಕಾರಣ ankita gurujagannatha vittala

by ಗುರುಜಗನ್ನಾಥದಾಸರು
ಶ್ರೀಕರಾರ್ಚಿತ ಜಗದೇಕಕಾರಣ ಶ್ರೀಕರಾದೇವಾ ಪ

ಸಾಕುವನಿಗೆ ನಾನ್ಯಾಕೆ ಬಾರೆನೊ ಮನಕೆ ಅ.ಪ

ವಸತಿಸ್ಥಳವಿಲ್ಲಾವಸುಧೆತಿರುಗುವೆನಲ್ಲಾವಸುಧೆಭಾರಾದೆನಲ್ಲಾ ಸ್ವಾಮಿವ್ಯಸನ ಬಡುತಿಹ ದ್ವಿಪದ ಪಶುವಿನ ನೋಡಿ ನಿನಗೆ 1

ಜನನಿಜನಕ ತನಯಾ ವನುತೆ ಈ ದೇಹಾಮನಕೆ ಬಾರೆನೊಅವರಅನುಕೂಲವಾಗದಲೆವನದಲ್ಲಿ ಸಂಚಾರ ಇನುತೆ ಮಾಳ್ಪನ ನೋಡಿ 2

ವರಣಿಸಾಲೇನಿನ್ನು ಸುಪರಣವಹÀನಭವಕರಣರಹಿತಶಾಯಿ ಕರಣ ವೈರಿಯಮಿತ್ರಕರುಣಿಸ್ಯನ್ನನು ಎಂದು ಶರಣು ಪೊಕ್ಕದು ನೋಡೀ 3

ನರರ ಸೇವೆಯ ಮಾಡಿ ನರರಗುಣಕೊಂಡಾಡಿನರರ ಮಾತನೆಕೇಳಿನರರಗಾಥವಕೇಳಿಹರಿನಿನ್ನ ಚರಣಾಶ್ರಯಸಿದವನಾ ನೋಡೀ4

ವಾತದೇವನತಾತಸೀತಾನಾಥನೆ ನಿನ್ನತಾತಕೇಳೀಗೆನ್ನ ಮಾತು ಮನಸಿಗೆ ತಂದುದಾತನೀನೆಂದು ನಾ ಆತುರದಿ ಬೇಡಿದೆನೊನೀತ ಗುರುಜಗನ್ನಾಥವಿಠಲ ನಿನಗೆ 5
*******