kruti ಕಾಖಂಡಕಿ ಶ್ರೀ ಕೃಷ್ಣದಾಸರು
ತಾತ ಮಹಿಪತಿ ದಯಾಕರಾ | ಶ್ರೀಕರಾ | ಭಯ ಪರಿಹಾರಾ | ಜಗದೋದ್ಧಾರಾ ಪ
ವನಜನಯನ ಪಾವನ ಕೃತಲೀಲಾ | ವನ ನಿಧಿ ಶಯನ ಸುವನ ಜಾಲೋಲಾ | ವನಜ ಸುಚರಣಾ ವನನರಪಾಲಾ | ವನಜ ಭವಾರ್ಚಿತ ವನಶುಭ ಮಾಲಾ1
ಹರಿಕೇಶವ ನರಹರಿ ಸರ್ವೇಶಾ | ಕರಿ ಹರಮುನಿ ಪೋಷಾ | ಹರಿಕುಲ ತಿಲಕ ವಿಹರಿಜಿತ ಭಾಸಾ | ಹರಿಚರರಿಪು ಸಂಹರ ಜಗದೀಶಾ2
ಗಿರಿಧರ ವಾಮನ ಗಿರಿರಿಪು ತಾತಾ | ಗಿರಿಧರ ಪರಿಶತ ಗಿರಿವರ ಪ್ರೀತಾ | ಗಿರಿಧರ ತನುಭವ ಗುರುವಿಖ್ಯಾತಾ | ಗಿರಿಮಾ ವೆಂಕಟ ಗಿರಿಧರ ದಾತಾ 3
***