Showing posts with label ನೀನೇ ಸಜ್ಜನರ ಬಂಧೂ ಕಾರುಣ್ಯ ಸಿಂಧೂ bheemesha krishna. Show all posts
Showing posts with label ನೀನೇ ಸಜ್ಜನರ ಬಂಧೂ ಕಾರುಣ್ಯ ಸಿಂಧೂ bheemesha krishna. Show all posts

Friday, 27 December 2019

ನೀನೇ ಸಜ್ಜನರ ಬಂಧೂ ಕಾರುಣ್ಯ ಸಿಂಧೂ ankita bheemesha krishna

ಹರಪನಹಳ್ಳಿ ಭೀಮವ್ವ

ರಾಗ : ಪೂರ್ವಿಕಲ್ಯಾಣಿ ರೂಪಕ ತಾಳ .p.

ನೀನೆ ಸಜ್ಜನರ ಬಂಧೂ ಕಾರುಣ್ಯ ಸಿಂಧೂ

ಕರಿಮರಿ ಬಳಗ ಬಂದೊದಗಿದರೇನೂ
ಪರಿಪರಿ ಕ್ಲೇಶವ ಬಿಡಿಸಲಿಲ್ಲ
ಹರಿ ನೀನೆ ಗತಿ ಎಂದರೆ ಆ ಕ್ಷಣದಲ್ಲಿ
ಕರಿ ಬಂಧನ ಪರಿಹರಿಸಿದೆ ಕೃಷ್ಣಾ....

ಯಾರಿದ್ದರೂ ಭವ ಘೋರ...
ದುರಿತ ಯಮ ಬಾಧೆಗಳ ತಪ್ಪಿಸುವರಿಲ್ಲ
ಶ್ರೀ ರಮಣನೆ ಭೀಮೇಶ ಕೃಷ್ಣನೆಂದೂ
ಸಾರುವರಿಗೆ ಕರುಣೆ ವಾರಿಧಿ ಹರಿಯೇ....
******